ವಿದ್ಯಾರ್ಥಿನಿಗೆ ಮುತ್ತು ಕೊಡಿಸಿ ವಿಡಿಯೋ: Ragging ಹೆಸರಲ್ಲಿ ರಾಕ್ಷಸೀ ಕೃತ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ರ್ಯಾಗಿಂಗ್ ಹೆಸರಲ್ಲಿ ವಿದ್ಯಾರ್ಥಿನಿ ಜೊತೆ ‘ವಿದ್ಯಾರ್ಥಿ’ಗಳು ಎನ್ನಲಾದ ತಂಡವೊಂದು ಹೇಯವಾಗಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಒಡಿಶಾದ ಬರಂಪುರಂನಲ್ಲಿರುವ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಅದೇ ಕಾಲೇಜಿನಲ್ಲಿ ಓದುತ್ತಿದ್ದ ಬಾಲಕಿಯನ್ನು ಐವರು ಹುಡುಗರು ಅಮಾನುಷವಾಗಿ ರ್ಯಾಗಿಂಗ್ ಮಾಡುವ ದೃಶ್ಯಾವಳಿ ಈ ವಿಡಿಯೋದಲ್ಲಿದೆ.

‘ವಿದ್ಯಾರ್ಥಿ’ಯೊಬ್ಬ ಆಕೆಗೆ ಬಲವಂತವಾಗಿ ಮುತ್ತಿಡಲು ಇನ್ನೊಬ್ಬ ‘ವಿದ್ಯಾರ್ಥಿ’ ಒತ್ತಡ ಹಾಕುತ್ತಿರುವುದು ವಿಡಿಯೋದಲ್ಲಿದ್ದು, ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. ಕಾಲೇಜು ಆವರಣದಲ್ಲಿ ನಡೆದ ಈ ಬೆಳವಣಿಗೆ ಎಲ್ಲರನ್ನು ಬೆಚ್ಚಿ ಬೀಳಿಸಿದ್ದು, ಎಲ್ಲೆಡೆಯಿಂದ ಕ್ರಮಕ್ಕೆ ಆಗ್ರಹ ಕೇಳಿಬರುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಲಟ್೯ ಆದ ಪೊಲೀಸರು, ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಪೈಕಿ ಇಬ್ಬರು ಅಪ್ರಾಪ್ತರು. ಇನ್ನು ಘಟನೆ ಸಂಬಂಧಿಸಿ 12 ವಿದ್ಯಾರ್ಥಿಗಳ ವಿರುದ್ಧ ಕಾಲೇಜು ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. ಅವರನ್ನು ಕಾಲೇಜಿನಿಂದ ವಜಾಗೊಳಿಸಲಾಗಿದೆ ಎಂದು ಪ್ರಾಂಶುಪಾಲೆ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!