Monday, August 15, 2022

Latest Posts

‘ಒಡೆದ ಮನಗಳ ಸರಿಮಾಡಿ’: ನವರಸ ನಾಯಕ ಜಗ್ಗೇಶ್ ಏಕೆ ಹೀಗೆ ಹೇಳಿದ್ರು?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ಚಿತ್ರರಂಗದಲ್ಲಿ ಆಗುತ್ತಿರುವ ಬದಲಾವಣೆಯ ಬಗ್ಗೆ ನವರಸನಾಯಕ ಜಗ್ಗೇಶ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದು ಹಾಕಿ, ”ಉದ್ಯಮದ ಹಿರಿಯರು, ವಾಣಿಜ್ಯ ಮಂಡಳಿ ಮಧ್ಯ ಪ್ರವೇಶಿಸಿ ಒಡೆದ ಮನಗಳ ಸರಿಮಾಡಿ” ಎಂದು ಜಗ್ಗೇಶ್ ಪ್ರಾರ್ಥನೆ ಮಾಡಿದ್ದಾರೆ.

ನಟ ಜಗ್ಗೇಶ್ ಫೇಶ್ ಬುಕ್ ಪೋಸ್ಟ್…

“ತುಮಕೂರು ಜಿಲ್ಲೆಯ, ತುರುವೇಕೆರೆ ತಾಲ್ಲೂಕಿನ, ಮಾಯಸಂದ್ರ ಹೋಬಳಿಯ, ಆನಡುಗು ಎಂಬ ಸಣ್ಣ ಗ್ರಾಮದ, ಸಣ್ಣ ಕುಟುಂಬದ, ಹಳ್ಳಿಹುಡುಗ ನಾನು ಈಶ್ವರ್ ಗೌಡ ಜಗ್ಗೇಶ..! ನನಗೆ ಇದ್ದ ಆಸೆ ರಾಜಕುಮಾರ್ ಕಂಡು ಮಾತಾಡಿಸಿ ಆಶೀರ್ವಾದ ಪಡೆದು ಸಿನಿಮ ನಟನಾಗ ಬೇಕು ಎಂಬುದು ಒಂದೆ ಗುರಿ!

1980ಕ್ಕೆ ಆ ಕಾರ್ಯ ಶುರು, ಆಗ ಹೇಗಿದ್ದೆ ನಾನು ದಾಖಲಿಸಿರುವೆ ಚಿತ್ರಗಳಲ್ಲಿ ಮತ್ತೊಮ್ಮೆ ಮುಖ ನೋಡಿ ನಕ್ಕುಬಿಡಿ! ಆ ಮುಖಕ್ಕೆ ಆಕಾಲಕ್ಕೆ ಸಿನಿಮ ನಟ ಆಗುವ ಕನಸ್ಸು? ಈಗಿನ ಜಗ್ಗೇಶನ ಮರೆತು ಯೋಚಿಸಿ ಇದು ಸಾಧ್ಯವಾ?

ಆಗ ಅಪ್ಪ-ಅಮ್ಮ, ಬಂಧು, ಮಿತ್ರರು ಹೇಳಿದ್ದು, ಉಗಿದದ್ದು ಹೀಗೆ ಮುಚ್ಕೊಂಡು ಅನ್ನ ಹುಡ್ಕೋ ಕ್ಯಾಮೆ ನೋಡು! ಶಿವಲಿಂಗಪ್ಪನ ಮರ್ಯಾದೆ ಉಳಿಸು ಮಂಗಮುಂಡೆದೆ ಎಂದು!
ಗುರುಹಿಂದೆ ಗುರಿಮಂದೆ ಹಠ ಬಿಡಲಿಲ್ಲಾ ಗಾಂಧಿನಗರ ಅಲೆದು ಚಪ್ಪಲಿಸವೆಸಿ ದಡಮುಟ್ಟಿದೆ ಎಂದುಬಿಟ್ಟರೆ ಆತ್ಮ ಧ್ರೋಹ ಆಗಿಬಿಡುತ್ತದೆ ಕಾರಣ ದಡಮುಟ್ಟಿಸಿದ್ದು ಅಂದಿನ ನಿರ್ದೇಶಕರು ನಿರ್ಮಾಪಕರು ಮಾಧ್ಯಮಮಿತ್ರರು ಹಾಗು ವಿಶೇಷವಾಗಿ ಸ್ವಾಭಿಮಾನಿ ಕನ್ನಡಿಗರು. ಹೇಳಿ ಹೇಗಿದ್ದರಬೇಕು ಅಪಮಾನ ಅವಮಾನ ಹಸಿವಿನಿಂದ ನಿದ್ರೆಗೆಟ್ಟು ಗೆದ್ದ ಒಬ್ಬ ಸಾಮಾನ್ಯನ ಬದುಕು.
ಆಗ ನಮ್ಮ ಬಗ್ಗೆ ಹೇಳಲು ಇದ್ದದ್ದು ಒಂದೆ ಬರಹಮಾಧ್ಯಮ ಮಾತ್ರ. ನೆನಪಿಡಿ ಇಂದು ನೂರಾರು ಮಾಧ್ಯಮ, ಅಂಗೈಯಲ್ಲೆ ಆಕಾಶ ತೋರಿ ಹತ್ತಾರುವರ್ಷ ಸಾಧನೆ ಕ್ಷಣ ಮಾತ್ರದಲ್ಲೆ ಅನುಮಾನದಿಂದ ಸಾಧಕನ ನೋಡುವಂತ ಮಾಯಾಜಾಲ ಸಾಮಾಜಿಕ ಜಾಲತಾಣ. ಸಿಕ್ಕಸಿಕ್ಕವರ ಕೈಲಿ ಈ ಜಾಲ ಸಿಕ್ಕು ವಯಸ್ಸು ಸಾಧನೆ ಅವರ ಮೂಗಿನ ನೇರಕ್ಕೆ ಅವರು ಬದುಕಿದ ಪರಿಸರ ಭಾಷೆ ಬಳಸಿ ಅವಮಾನ ಮಾಡಿ ವಿಕೃತ ಆನಂದ ಅನುಭವಿಸುವುದು.
ವಿಪರ್ಯಾಸ ದಿನಗಳು. ಇಂದಿನ ಸಾರ್ವಜನಿಕ ಜೀವನ ಪಬ್ಲಿಕ್ ಟಾಯಲೆಟ್ ನಂತೆ ಆಗಿಬಿಟ್ಟಿದೆ. ಆದರು ವಿಧಿಯಿಲ್ಲಾ ಚರ್ಮ ದಪ್ಪಮಾಡಿ ಬದುಕಬೇಕು. ಈಗ ವಿಷಯಕ್ಕೆ ಬರುವೆ ಈ ಅಕ್ಷರ ಠಂಕಿಸಿದ್ದಕ್ಕೆ
ಉಧ್ಯಮದ ಕಲಾಬಂಧುಗಳಿಗೆ ನನ್ನ ಸಣ್ಣ ಅನುಭವದ ನುಡಿ.

ಮಾನ್ಯರೆ.. ನಶ್ವರ ಬಣ್ಣದ ಬದುಕು. ಕಲಾವಿಧನ ಜೀವನ ನಡೆಯುವವರೆಗೆ ನಾಣ್ಯ ಮಿಕ್ಕಂತೆ ಸವಕಲು. ಎಲ್ಲಿಯವರೆಗು ಕಲಾವಿದ ವರ್ಷಕ್ಕೆ ಮಾತ್ರ ಹೊರಬರುವ ಊರ ಮೆರೆದೇವರಂತೆ ಹೊರ ಬರಬೇಕು. ಆಗ ದೇವರಪರ ಅದ್ಭುತ ಅನನ್ಯ. ದಿನ ಆ ದೇವರು ಬೀದಿಗೆ ಬಂದರೆ ಮೌಲ್ಯ ಇರುವುದಿಲ್ಲಾ. ರಾಜನಾಗಲಿ ಸೇವಕನಾಗಲಿ ಜಗಳ ಗರ್ಷಣೆ ಸಹಜ. ಆ ಘರ್ಷಣೆ ನಿಭಾಯಿಸುವ ಕಲೆ ಕರಗತ ಆಗಿರಬೇಕು ಆಗ ಕಾಡ್ಗಿಚ್ಚನ್ನು ತಣ್ಣಗೆ ಮಾಡಬಹುದು. ಹಾಗೆ ಅನ್ಯತ ಭಾವಿಸದೆ ನನ್ನ ಮಾತು ಆಲಿಸಬೇಕು.
ಕಲಾಬಂಧುಗಳು!

ಆತ್ಮೀಯ ಮಾಧ್ಯಮಮಿತ್ರರು ಕಲಾರಂಗದ ನಮ್ಮ ಕಾಯಕ ಜನರಿಗೆ ತಲುಪಿಸೋ ನಾವಿಕರು, ನಾವು ನೀವು ದೇಹದ ಎರಡು ಕಣ್ಣಂತೆ ಯಾವುದಕ್ಕೆ ನೋವಾದರೂ ನಮಗೆ ನಷ್ಟ! ದಯಮಾಡಿ ವಿಶೇಷ ಹೃದಯ ನಿಮ್ಮದಾಗಿ ನಮ್ಮ ಚಿತ್ರರಂಗ ಬೀದಿಚರ್ಚೆಗೆ ವಿಷಯವಾಗದಿರಲಿ ವಿನಂತಿ! ಈಗಾಗಲೆ ಚಿತ್ರರಂಗ ಕೊರೊನಾ ಹೆಮ್ಮಾರಿ ಹೊಡೆತಕ್ಕೆ ನಲುಗಿದೆ! ಉದ್ಯಮದ ಹಿರಿಯರು ವಾಣಿಜ್ಯ ಮಂಡಳಿ ಮಧ್ಯ ಪ್ರವೇಶಿಸಿ ಒಡೆದ ಮನಗಳ ಸರಿಮಾಡಿ ಎಂದು ಪ್ರಾರ್ಥನೆ” ಎಂದು ಫೇಸ್‌ಬುಕ್‌ನಲ್ಲಿ ಜಗ್ಗೇಶ್ ಬರೆದುಕೊಂಡಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss