Sunday, June 26, 2022

Latest Posts

ತಮಿಳುನಾಡಿನ ಪಕ್ಷಿಧಾಮಕ್ಕೆ ವಲಸೆ ಬಂದ ಫ್ಲೆಮಿಂಗೋಗಳು : ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ಕೊಡಿಯಾಕರೈನಲ್ಲಿರುವ ಪಾಯಿಂಟ್ ಕ್ಯಾಲಿಮರ್ ವನ್ಯಜೀವಿ ಮತ್ತು ಪಕ್ಷಿಧಾಮಕ್ಕೆ ಸಾವಿರಾರು ಹಕ್ಕಿಗಳು ವಲಸೆ ಬಂದಿದ್ದು, ನೋಡುಗರ ಕಣ್ಮನತಣಿಸುತ್ತಿವೆ.
ಮುಖ್ಯವಾಗಿ ಫ್ಲೆಮಿಂಗೋ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಆಗಮಿಸಿದ್ದು, ಇದರ ವಿಡಿಯೋ ಒಂದು ವೈರಲ್ ಆಗಿದೆ.
ಒಟ್ಟಾರೆ ನಾಲ್ಕು ಜಾತಿಯ ಫ್ಲೆಮಿಂಗೋಗಳು ಅಮೆರಿಕದಲ್ಲಿ ಕಾಣಸಿಗುತ್ತವೆ. ಇನ್ನೆರಡು ಜಾತಿ ಆಫ್ರಿಕಾದಲ್ಲಿ ಕಾಣಸಿಗುತ್ತವೆ. ಚಳಿಗಾಲದ ಸಂದರ್ಭದಲ್ಲಿ ಈ ಹಕ್ಕಿಗಳು ವಲಸೆ ಬರುತ್ತವೆ.
ತಮಿಳುನಾಡಿನ ಅರಣ್ಯ ಮತ್ತು ಪರಿಸರ ಹವಾಮಾನ ಬದಲಾವಣೆ ಕಾರ್ಯದರ್ಶಿ ಸುಪ್ರಿಯಾ ಸಾಹು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

20 ಚದರ ಕಿ.ಮೀ ನಿತ್ಯಹರಿದ್ವರ್ಣ ಕಾಡುಗಳನ್ನು ಹೊಂದಿರುವ ಕೊಡಿಯಾಕರೈ ವನ್ಯಜೀವಿಧಾಮಕ್ಕೆ ಪ್ರತಿ ವರ್ಷವೂ ಹಕ್ಕಿಗಳು ವಲಸೆ ಬರುತ್ತವೆ. ಇದೀಗ 250  ಜಾತಿಯ ಪಕ್ಷಿಗಳನ್ನು ಇಲ್ಲಿ ಕಾಣಬಹುದು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss