Tuesday, August 16, 2022

Latest Posts

ಸೆ.13ರಿಂದ ಇಸ್ಲಾಮಾಬಾದ್ ನಿಂದ ಕಾಬೂಲ್ ಗೆ ವಿಮಾನಯಾನ ಸೇವೆ ಆರಂಭಿಸಲಿದೆ ಪಾಕ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ (ಪಿಐಎ) ಮುಂದಿನ ವಾರದಿಂದ ಇಸ್ಲಾಮಾಬಾದ್ ನಿಂದ ಕಾಬೂಲ್ ಗೆ ವಿಮಾನ ಹಾರಾಟ ಪುನರಾರಂಭಿಸಲಿದೆ.

ಈ ಬಗ್ಗೆ  ಏರ್‌ಲೈನ್ ವಕ್ತಾರ ಅಬ್ದುಲ್ಲಾ ಹಫೀಜ್ ಖಾನ್ ಮಾಹಿತಿ ನೀಡಿದ್ದು, ‘ವಿಮಾನ ಕಾರ್ಯಾಚರಣೆಗಾಗಿ  ಎಲ್ಲಾ ರೀತಿಯ ತಾಂತ್ರಿಕ ಅನುಮತಿ ಪಡೆಯಲಾಗಿದೆ. ಸೆಪ್ಟೆಂಬರ್ 13 ನಮ್ಮ  ಮೊದಲ ವಾಣಿಜ್ಯ ವಿಮಾನ ಏರ್‌ಬಸ್ A320 ಇಸ್ಲಾಮಾಬಾದ್‌ನಿಂದ ಕಾಬೂಲ್‌ಗೆ ಹಾರಾಡಲು ಸಿದ್ಧವಾಗಿದೆ’ ಎಂದು ತಿಳಿಸಿದ್ದಾರೆ.

‘ಮಾನವೀಯ ಪರಿಹಾರ ಸಂಸ್ಥೆಗಳು ಮತ್ತು ಪತ್ರಕರ್ತರಿಂದ ನಾವು 73 ಮನವಿಗಳನ್ನು ಸ್ವೀಕರಿಸಿದ್ದೇವೆ, ಇದು ತುಂಬಾ ಪ್ರೋತ್ಸಾಹದಾಯಕವಾಗಿದೆ’ ಎಂದು ಹಫೀಜ್ ಹೇಳಿದ್ದಾರೆ

ಕಳೆದ ತಿಂಗಳು ತಾಲಿಬಾನ್ ಅಫಘಾನಿಸ್ತಾನವನ್ನು  ವಶಪಡಿಸಿಕೊಂಡ ನಂತರ ಆರಂಭಗೊಂಡ ಮೊದಲ ವಿದೇಶಿ ವಾಣಿಜ್ಯ ಸೇವೆ ಇದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss