Wednesday, July 6, 2022

Latest Posts

ಕಾಡಾನೆ ಹಿಂಡು ದಾಳಿ; ಬೆಳೆದು ನಿಂತ ಪೈರು ನಾಶ: ರೈತ ಕಂಗಾಲು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಸುಂಟಿಕೊಪ್ಪ:

ಕಂಬಿಬಾಣೆ ಗ್ರಾಮ ಪಂಚಾಯಿತಿಯ ಉಪ್ಪುತೋಡು ಗ್ರಾಮಕ್ಕೆ ಗುರುವಾರ ಮಧ್ಯರಾತ್ರಿ ದಾಳಿ‌ ಮಾಡಿರುವ ಕಾಡಾನೆಗಳ ಹಿಂಡು ಹೊಸಗದ್ದೆ ಮಂಜುನಾಥ ರೈ ಅವರ ನಾಟಿ ಮಾಡಿ ಬೆಳೆದು ನಿಂತ ಪೈರುಗಳನ್ನು ತಿಂದು, ತುಳಿದು ನಾಶಪಡಿಸಿವೆ.
ಗುರುವಾರ ಮಧ್ಯರಾತ್ರಿ ಈ ಭಾಗಕ್ಕೆ ಆಹಾರ ಅರಸಿ ಬಂದ ಕಾಡಾನೆಗಳು ಗದ್ದೆಯಲ್ಲಿ ಓಡಾಡಿ ಪೈರುಗಳನ್ನು ತಿಂದು ನಾಶಪಡಿಸಿದ್ದು, ಸುಮಾರು 40 ಸಾವಿರ ರೂ.ಗಳಷ್ಟು ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
ನಂತರ ತೋಟದಲ್ಲಿಯೇ ಕಾಡಾನೆಗಳು ವಾಸ್ತವ್ಯ ಹೂಡಿದ್ದು, ಕೂಡಲೇ ತೋಟದ ಮಾಲಕರು ಹಾಗೂ ಸ್ಥಳೀಯರಿ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.
ಸುತ್ತಮುತ್ತಲಿನ ತೋಟಗಳಲ್ಲಿ ಹಗಲು ವೇಳೆಯಲ್ಲಿಯೇ ಆನೆಗಳು ಕಂಡುಬರುತ್ತಿದ್ದು, ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಅಂಜುತ್ತಿದ್ದಾರೆ.ಸಾರ್ವಜನಿಕರು ಮನೆಯಿಂದ ಹೊರ ಬರುವುದಕ್ಕೂ ಭಯ ಪಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಆನೆಗಳನ್ನು ಅರಣ್ಯಗಳಿಗೆ ಓಡಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
ಪರಿಹಾರಕ್ಕಾಗಿ ಹೊಸಗದ್ದೆ ಮನೆ ಮಂಜುನಾಥ ರೈ ಅವರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಆದರೆ ಪರಿಹಾರದ ಹೆಸರಿನಲ್ಲಿ ಅರಣ್ಯ ಇಲಾಖೆಯಿಂದ ನೀಡಲಾಗುವ ಹಣ ಯಾವುದಕ್ಕೂ ಸಾಲದು.ಆನೆಗಳು ಕಾಡಿನಿಂದ ನಾಡಿಗೆ ಬರದಂತೆ ಅರಣ್ಯ ಇಲಾಖೆಯವರು ತಡೆದರೆ ಆಧಿಕ ವೆಚ್ಚ ತಗಲುವ ಗದ್ದೆ ಕೃಷಿಯನ್ನು ಉಳಿಸಿಕೊಳ್ಳಲು ರೈತರಿಗೆ ಅನುಕೂಲವಾಗುತ್ತದೆ ಎಂದು ಈ ಭಾಗದ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss