spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪ್ರವಾಹದ ನಡುವಿನ ಆಪದ್ಬಾಂಧವರು- ಎನ್ ಡಿ ಆರ್ ಎಫ್

- Advertisement -Nitte

ಪ್ರೀತಿಯ ಓದುಗರೇ,

ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪ್ರತಿಬಾರಿ ಪ್ರವಾಹ ಉಕ್ಕಿದಾಗಲೂ ಆ ನೀರಿನ ರಭಸಗಳ ಮಧ್ಯೆ ರಬ್ಬರ್ ದೋಣಿ ತೇಲಿಸಿಕೊಂಡು ಸಂತ್ರಸ್ತರ ಸಹಾಯಕ್ಕೆ ಧಾವಿಸುವ, ನೀರಲ್ಲಿ ಮುಳಗದಂತೆ ತಡೆಯುವ ಜೀವರಕ್ಷಕ ಜಾಕೀಟು ಮತ್ತು ಆಹಾರ ಸಾಮಗ್ರಿ ವಿತರಣೆ ಇಂಥವನ್ನೂ ಮಾಡುವ ಈ ಗುಂಪನ್ನು ನೀವು ನೋಡಿಯೇ ಇರುತ್ತೀರಿ. ಕರ್ನಾಟಕವೂ ಸೇರಿದಂತೆ ದೇಶದ ಹಲವು ಭಾಗಗಳು ಭಾರೀ ಮಳೆಗೆ ಪ್ರವಾಸತ್ರಸ್ತವಾಗಿರುವ ಈ ಸಂದರ್ಭದಲ್ಲಿ ವಿಶೇಷವಾಗಿ ಅತಿಯಾಗಿ ಪೀಡಿತವಾಗಿರುವ ಮಹಾರಾಷ್ಟ್ರದಲ್ಲಿ ಈ ಆಪದ್ಭಾಂದವರನ್ನು ಹೆಚ್ಚಾಗಿ ನೋಡುತ್ತೀರಿ. ಇಂಥ ಸಂದರ್ಭದಲ್ಲಿ ನಾವೆಲ್ಲ ಕೃತಜ್ಞತೆಯಿಂದ ನೆನೆಯಬೇಕಾದ ಪಡೆ ಎನ್ ಡಿ ಆರ್ ಎಫ್- ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ. 

ಎನ್ ಡಿ ಆರ್ ಎಫ್ ದಣಿವರಿಯದ ಸೇವೆ

ಸದ್ಯದ ಪ್ರವಾಹ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ, ಭುವನೇಶ್ವರ, ಕೋಯಮತ್ತೂರು ಇಲ್ಲೆಲ್ಲ ಎನ್ ಡಿ ಆರ್ ಎಫ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ರಕ್ಷಣಾ ಕಾರ್ಯಾಚರಣೆಗಳಿಗಾಗಿ ನೇಮಿಸಲಾಗಿದೆ. ಮಹಾರಾಷ್ಟ್ರದ ಸಾಂಗ್ಲಿ, ಸತಾರಾ, ರಾಯಘಡ ಮುಂತಾದ ಅತಿ ಪ್ರವಾಹದ ಸ್ಥಳಗಳಿಂದ ಸುಮಾರು 2,000 ಜನರನ್ನು ಈ ಪಡೆ ರಕ್ಷಿಸಿದೆ.

ಪಡೆಯ ಇತಿಹಾಸ

2006ರಲ್ಲಿ 8 ಬಟಾಲಿಯನ್ ಬಲದಲ್ಲಿ ಪ್ರಾರಂಭವಾಯಿತು ಈ ವಿಪತ್ತು ನಿರ್ವಹಣೆಯ ಪಡೆ. ಇತ್ತೀಚಿನ ವರ್ಷಗಳಲ್ಲಿ ಮೋದಿ ಸರ್ಕಾರ ಈ ಬಲವನ್ನು ಹೆಚ್ಚಿಸಿ 12 ಬಟಾಲಿಯನ್ ವರೆಗೆ ವೃದ್ಧಿಸಿದೆ. ಪ್ರತಿ ಬಟಾಲಿಯನ್ ನಲ್ಲಿ ಬಿ ಎಸ್ ಎಫ್, ಐ ಟಿ ಬಿ ಪಿ, ಸಿ ಐ ಎಸ್ ಎಫ್, ಸಿ ಆರ್ ಪಿ ಎಫ್, ಎಸ್ ಎಸ್ ಬಿಗಳಿಂದ ಬಂದ 1,149 ಸೇನಾನಿಗಳಿರುತ್ತಾರೆ. 

2019ರಲ್ಲಿ ದೇಶಾದ್ಯಂತ ವಿಪತ್ತು ನಿರ್ವಹಣೆಗೆ ಒದಗಿಬರುವ ಸಲಕರಣೆಗಳ ಡೆಟಾಬೇಸ್ ತಯಾರಿಸುವ ಕಾರ್ಯವನ್ನೂ ಮೋದಿ ಸರ್ಕಾರ ಎನ್ ಡಿ ಆರ್ ಎಫ್ ಗೆ ವಹಿಸಿದೆ. ಇದರಿಂದ ವಿಪತ್ತು ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಮಾಡಬಹುದು. 

ವಿಪತ್ತು ನಿರ್ವಹಣೆಯಲ್ಲಿ ರಾಜ್ಯಗಳಿಗೆ ನೀಡುವ ಹಣಕಾಸು ಪಾಲನ್ನೂ 2018ರಲ್ಲಿ ಶೇ. 75 ರಿಂದ ಶೇ.90ಕ್ಕೆ ಹೆಚ್ಚಿಸಲಾಗಿದೆ. 

ಮಾದರಿ ಕಾರ್ಯಾಚರಣೆಗಳು

ಸೆಪ್ಟೆಂಬರ್ 2014ರಲ್ಲಿ ಎನ್ ಡಿ ಆರ್ ಎಫ್ ಜಮ್ಮು-ಕಾಶ್ಮೀರ ಪ್ರವಾಹದಲ್ಲಿ ಸುಮಾರು 50,000 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕರೆತಂದಿತ್ತು. 

ಡಿಸೆಂಬರ್ 2015ರಲ್ಲಿ ಚೆನ್ನೈ ಪ್ರವಾಹಪೀಡಿತವಾದಾಗ 14,000 ಜನರನ್ನು ರಕ್ಷಿಸಿತ್ತು.

2015ರಲ್ಲಿ ನೇಪಾಳದಲ್ಲಿ ಭೂಕಂಪವಾದಾಗ ಅಲ್ಲಿಗೂ ರಕ್ಷಣಾ ಕಾರ್ಯಗಳಿಗೆ ಧಾವಿಸಿತ್ತು.

2019ರಲ್ಲಿ ಪ್ರವಾಹದ ಮಧ್ಯೆ ಸಿಲುಕಿದ್ದ ಮಹಾಲಕ್ಷ್ಮೀ ಎಕ್ಸ್ಪ್ರೆಸ್ ರೈಲಿನಲ್ಲಿದ್ದ 1,000 ಮಂದಿಯನ್ನು 15 ತಾಸುಗಳ ಕಾರ್ಯಾಚರಣೆಯಲ್ಲಿ ರಕ್ಷಿಸಿತ್ತು.

ಪ್ರವಾಹ, ಕಟ್ಟಡ ಕುಸಿತ, ಭೂ ಕುಸಿತ ಹೀಗೆ ಏನೇ ವಿಪತ್ತುಗಳು ಅಪ್ಪಳಿಸಿದರೂ ಮುಂಚೂಣಿಯಲ್ಲಿ ನಿಲ್ಲುವ ಎನ್ ಡಿ ಆರ್ ಎಫ್ ಯೋಧರಿಗೆ ಪ್ರವಾಹದ ಸಂಕಷ್ಟದ ಈ ಸ್ಥಿತಿಯಲ್ಲಿ ಒಂದು ಅಭಿಮಾನದ ಸೆಲ್ಯೂಟ್ ಇರಲಿ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss