ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಅಂಕೋಲಾ:
ಗಂಗಾವಳಿ ನದಿಯ ಭಾರಿ ಪ್ರವಾಹಕ್ಕೆ ಸಿಲುಕಿ ಹಳವಳ್ಳಿ ಸೇತುವೆ ಕೊಚ್ಚಿಹೋಗಿದ್ದು ಐದಾರು ಹಳ್ಳಿಗಳು ಸಂಪರ್ಕ ಕಡಿದುಕೊಂಡಿವೆ.
ಶುಕ್ರವಾರ ಬಂದ ಶತಮಾನದ ಭೀಕರ ನೆರೆ ಗಂಗಾವಳಿ ನದಿ ಪಾತ್ರದ 20 ಕ್ಕೂ ಅಧಿಕ ಹಳ್ಳಿಗಳ ಬದುಕನ್ನು ಕಂಗೆಡಿಸಿದ್ದು 38 ಕಾಳಜಿಕೇಂದ್ರಗಳಲ್ಲಿ 2500 ಕ್ಕೂ ಅಧಿಕ ಜನಕ್ಕೆ ಆಶ್ರಯ ಒದಗಿಸಲಾಗಿದೆ.
ಸೇತುವೆ ಕುಸಿತ: ಈ ಮಧ್ಯೆ ಗಂಗಾವಳಿ ನದಿ ಪಾತ್ತದ ಐದಾರು ಹಳ್ಳಿಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ, ಸುಮಾರು ಐವತ್ತು ವರ್ಷಗಳಷ್ಟು ಹಳೆಯದಾದ ಹಳವಳ್ಳಿ ಸೇತುವೆ ಶುಕ್ರವಾರ ರಾತ್ರಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದೆ. ಇದರಿಂದಾಗಿ ಹಳವಳ್ಳಿ, ಕಲ್ಲಶ್ವರ, ಡೋಂಗ್ರಿ, ಶೇವಕಾರ ಸೇರಿದಂತೆ ಐದಾರು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ.
ಒಂದೂವರೆ ಸಾವಿರಕ್ಕೂಅಧಿಕ ಮನೆಗಳು ಸಂಪರ್ಕ ರಹಿತವಾಗಿವೆ.
ಪತ್ತೆಯಾಗಿಲ್ಲ: ಇನ್ನು ಗಂಗಾವಳಿ ನದಿಯಲ್ಲಿ ದೋಣಿ ಮಗುಚಿ ಕಾಣೆಯಾಗಿದ್ದ ಶಿರೂರಿನ ಗಂಗಾಧರ ದೇವು ಗೌಡ ಮತ್ತು ಬೀರು ಮೋರು ಗೌಡ ಶನಿವಾರವೂ ಪತ್ತೆಯಾಗಿಲ್ಲ. ಇವರ ಶೋಧ ಕಾರ್ಯ ಭರದಿಂದ ಸಾಗಿದೆ.
ಶನಿವಾರ ನೀರಿನ ಮಟ್ಟ ಇಳಿಯುತ್ತಿದ್ದು, ಗಂಗಾವಳಿ ನದಿ ಪಾತ್ರದ 20 ಹಳ್ಳಿಗಳ ಸಾವಿರಕ್ಕೂ ಅಧಿಕ ಮನೆಗಳು ನೀರಲ್ಲಿ ಮುಳುಗಿರುವ ಅಂದಾಜು ಮಾಡಲಾಗಿದೆ.
ಶಾಸಕಿ ರೂಪಾಲಿ, ತಹಶೀಲ್ದಾರ್ ಉದಯ ಕುಂಬಾರ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪಿ. ವೈ. ಸಾವಂತ , ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಅಧಿಕಾರಿ ವಲಯ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.