ಆಸ್ಟ್ರೇಲಿಯಾದಲ್ಲಿ ಪ್ರವಾಹ: ಜಪಾನ್‌ನಲ್ಲಿ ಅತೀ ಉಷ್ಣಾಂಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅತ್ತ ಆಸ್ಟ್ರೇಲಿಯಾದಲ್ಲಿ ಆರ್ಭಟಿಸುತ್ತಿರುವ ಪ್ರವಾಹ, ಇತ್ತ ಜಪಾನ್‌ನಲ್ಲಿ ಮೈಸುಡುವ ಉಷ್ಣಾಂಶ… ವಿಲಕ್ಷಣ ವಿದ್ಯಮಾನಕ್ಕೆ ಜಗತ್ತು ಸಾಕ್ಷಿಯಾಗುತ್ತಿದೆ. ಜಪಾನ್ ನಲ್ಲಿ 1875ರ ಬಳಿಕ ಇದೇ ಮೊದಲ ಬಾರಿಗೆ ಚರ್ಮ ಕರಗಿಸುವ ಮಟ್ಟದಲ್ಲಿ ಉಷ್ಣಾಂಶ ಏರಿಕೆ ದಾಖಲಾಗಿದ್ದು, ಟೋಕಿಯೋದಲ್ಲಿ ಶುಕ್ರವಾರ ಉಷ್ಣಾಂಶ 104 ಡಿಗ್ರಿಗೆ ಏರಿಕೆಯಾಗುವ ಮೂಲಕ ತನ್ನ ಹಳೆಯ ದಾಖಲೆಗಳನ್ನು ಮುರಿದಿದೆ. ಸದ್ಯ 95 ಡಿಗ್ರಿ ಉಷ್ಣಾಂಶವಿದ್ದು, ಬದುಕನ್ನು ನರಕ ಸದೃಶವಾಗಿಸಿದೆ. ಈ ನಡುವೆ ವಿದ್ಯುತ್ ಕೊರತೆ ಕಾಡುತ್ತಿದ್ದರೂ ಏರ್‌ ಕಂಡೀಷನರ್‌ಗಳನ್ನು ಬಳಸುವಂತೆ ಆಡಳಿತ ಸಲಹೆ ನೀಡಿದೆ.

ಜಪಾನ್ ಸ್ಥಿತಿ ಹೀಗಿದ್ದರೆ ಇತ್ತ ಆಸ್ಟ್ರೇಲಿಯಾದ ಸಿಡ್ನಿಯ ಪೂರ್ವ ಕರಾವಳಿಯಲ್ಲಿ ಕಂಡುಕೇಳರಿಯದ ರೀತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಗಳು ಅಪಾಯದ‌ಮಟ್ಟ ಮೀರಿ ಭಯಹುಟ್ಟಿಸಿವೆ. ಅಣೆಕಟ್ಟುಗಳೂ ತುಂಬಿಕೊಂಡಿದ್ದು, ಎಲ್ಲೆಡೆ ಜಲಪ್ರವಾಹ ಭೀತಿ ಎದುರಾಗಿದೆ. ಈ ನಡುವೆ ಭಾನುವಾರ ನ್ಯೂ ಸೌತ್ ವೇಲ್ಸ್ ರಾಜ್ಯದ ನ್ಯೂಕ್ಯಾಸಲ್‌ನಿಂದ ಬ್ಯಾಟೆಮನ್ಸ್ ಕೊಲ್ಲಿಯವರೆಗೆ ಭೂಕುಸಿತ ಸಂಭವಿಸಿ ಹೊಸ ಅತಂಕ ಸೃಷ್ಟಿಸಿದೆ.

ಮಳೆ ಇನ್ನಷ್ಟು ಬಿರುಸಾಗುವ ಸಾಧ್ಯತೆ ನಡುವೆ ಬಲವಾದ ಗಾಳಿ ಪೂರ್ವ ಕರಾವಳಿಯನ್ನು ಅಪ್ಪಳಿಸಲಿ ಎಂದು ಹವಾಮಾನ ವರದಿ ಹೇಳಿವೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಪ್ರವಾಹ ಸಂಭವಿಸುವ ಸಾಧ್ಯತೆಯಿದೆ. ಹೀಗಾಗಿ ಸಿಡ್ನಿ ನಿವಾಸಿಗಳನ್ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಆದೇಶಿಸಲಾಗಿದೆ.  ನ್ಯೂ ಸೌತ್ ವೇಲ್ಸ್ ತುರ್ತು ಸೇವೆಗಳ ಸಚಿವ ಸ್ಟೆಫ್ ಕುಕ್ ಭಾನುವಾರ ಸಂಜೆ ದೂರದರ್ಶನದ ಮೂಲಕ ಜನತೆಗೆ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!