Sunday, April 18, 2021

Latest Posts

ಇಂಡೊನೇಷ್ಯಾದ ಪ್ರವಾಹ- ಭೂಕುಸಿತ: ಮೃತರ ಸಂಖ್ಯೆ 126ಕ್ಕೆ ಏರಿಕೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪೂರ್ವ ಇಂಡೊನೇಷ್ಯಾದಲ್ಲಿ ಸಂಭವಿಸಿದ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಮೃತರ ಸಂಖ್ಯೆ 126ಕ್ಕೆ ಏರಿದೆ. ಇನ್ನೂ ಹಲವಾರು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಇನ್ನೂ ಮಳೆ ಬೀಳುತ್ತಿದ್ದು, ಪರಿಹಾರ ಕಾರ್ಯ ಹಾಗೂ ನಾಪತ್ತೆಯಾಗಿರುವವರನ್ನು ಹುಡುಕುವುದಕ್ಕೆ ತೊಂದರೆಯಾಗಿದೆ. ಪ್ರವಾಹದಿಂದಾಗಿ ಇಂಡೊನೇಷ್ಯಾದ ಫ್ಲೋರ್ಸ್‌ ದ್ವೀಪದಿಂದ ಪೂರ್ವ ಟಿಮೋರ್‌ವರೆಗೆ ವ್ಯಾಪಿಸಿರುವ ದ್ವೀಪಗಳಲ್ಲಿ ತೀವ್ರ ಹಾನಿಯಾಗಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.
ಪೂರ್ವ ಫ್ಲೋರ್ಸ್ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಇಲ್ಲಿ ಈ ವರೆಗೆ 67 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 6 ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss