ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚಪಾತಿ, ದೋಸೆ, ಅನ್ನ ಎಲ್ಲದಕ್ಕೂ ಬರುತ್ತೆ ಈ ಹೂ ಕೋಸು ಪಲ್ಯ.. ಹೇಗೆ ಮಾಡುವುದು ನೋಡಿ..

ಯಾವಾಗಲೂ ಒಂದೇ ರೀತಿ ಪಲ್ಯ ಮಾಡುವ ಬದಲು ಬೇರೆ ಬೇರೆ ಪಲ್ಯ ಮಾಡಿ. ಹೂ ಕೋಸು ಆರೋಗ್ಯಕ್ಕೂ ಒಳ್ಳೆಯದು. ತಿನ್ನುವುದಕ್ಕೂ ರುಚಿ. ಈ ಪಲ್ಯವನ್ನು ಚಪಾತಿ, ದೋಸೆ, ಅನ್ನದ ಜೊತೆ ತಿನ್ನಬಹುದು.. ಇಲ್ಲಿದೆ ಈಸಿ ರೆಸಿಪಿ..

ಬೇಕಾಗುವ ಸಾಮಗ್ರಿ:

ಹೂ ಕೋಸು
ಅರಿಶಿಣ
ಸಾಸಿವೆ
ಇಂಗು
ಉಪ್ಪು
ಹುಣಸೆಹಣ್ಣು
ಕರಿಬೇವು
ಇಂಗು
ಕಾಯಿ ತುರಿ

ಮಾಡುವ ವಿಧಾನ:
ಬಾಣಲೆಯಲ್ಲಿ  ಎಣ್ಣೆ ಎರಡು ಚಮಚ ಹಾಕಿ.
ಅದಕ್ಕೆ ಸಾಸಿವೆ ಕರಿಬೇವು ಇಂಗು ಅರಿಶಿನ ಪುಡಿ ಹಾಕಿ..
ನಂತರ ಸಣ್ಣಗೆ ಹೆಚ್ಚಿದ ಹೂ ಕೋಸು , ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ
ಹುಣಸೆಹಣ್ಣಿನ ರಸ ಎರಡು ಚಮಚ, ಬೆಲ್ಲ ನಿಂಬೆ ಗಾತ್ರದಷ್ಟು ಹಾಕಿ ಚೆನ್ನಾಗಿ ಮುಚ್ಚಿಡಿ. ಬೇಕಿದ್ದರೆ ನೀರು ಹಾಕಿ.
ನಂತರ ಕಾಯಿತುರಿ ಮೂರು ಚಮಚ, ಹಸಿಮೆಣಸು ಮೂರು ಹಾಕಿ ಮಿಕ್ಸಿಯಲ್ಲಿ ನೀರು ಹಾಕದೆ ಒಂದು ಸುತ್ತು ರುಬ್ಬಿಕೊಂಡು ನಂತರ ಪಲ್ಯದ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಬೇಯಿಸಿದರೆ ಹೂ ಕೋಸು ಪಲ್ಯ ರೆಡಿ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss