Sunday, April 18, 2021

Latest Posts

ಸ್ಮಾರ್ಟ್ ಫೋನ್’ಗಳು ಸ್ಫೋಟಗೊಳ್ಳದಂತೆ ತಡೆಯಲು ಈ ಸಿಂಪಲ್ ವಿಧಾನ ಅನುಸರಿಸಿ…

ಫೋನ್ ಸ್ಫೋಟಗೊಂಡು ಭೀಕರ ಅನಾಹುತಗಳು ನಡೆದಿರುವ ಸುದ್ದಿಗಳನ್ನು ಇತ್ತೀಚೆಗೆ ಬಹಳ ಕೇಳುತ್ತಿದ್ದೇವೆ. ಹೆಚ್ಚಾಗಿ ಫೋನ್ ಗಳು ಸ್ಫೋಟಿಸುವುದು ಚಾರ್ಜ್ ಹಾಕಿರುವಾಗ ಅಥವಾ ಮಾತನಾಡುತ್ತಿರುವಾಗ. ಫೋನ್ ಗಳು ಸ್ಫೋಟಿಸಬಾರದೆಂದರೆ ಈ ಕೆಳಗಿನ ಸಿಂಪಲ್ ಟಿಪ್ಸ್ ಟ್ರೈ ಮಾಡಿ…

  • ನೀವು ಬಳಸುವ ಫೋನ್ ಗೆ ಅದೇ ಕಂಪನಿಯ ನಿಮ್ಮ ಚಾರ್ಜರ್ ಗಳನ್ನೇ ಬಳಸಿ ಬೇರೆ ಕಂಪನಿಯ ಮತ್ತು ಬೇರೆಯವರ ಚಾರ್ಜರ್ ಬಳಸಬೇಡಿ.
  • ಪೋನ್ ಬ್ಯಾಟರಿ ಉಬ್ಬಿಕೊಂಡಿದ್ದರೆ ತಕ್ಷಣ ಬದಲಿಸಿ. ಉಬ್ಬಿದ ಬ್ಯಾಟರಿ ಸ್ಫೋಟಿಸುವ ಸಾಧ್ಯತೆ ಹೆಚ್ಚಿರುತ್ತದೆ.
  • ಫೋನ್ ಚಾರ್ಜಿಂಗ್ ನಲ್ಲಿಟ್ಟಾಗ ಬಳಸಬೇಡಿ. ಅದರಲ್ಲೂ ಗೇಮ್ ಆಡಲೇ ಬೇಡಿ.
  • ಬಿಸಿ ವಾತಾವರಣದಲ್ಲಿ ಫೋನ್ ಚಾರ್ಜ್ ಮಾಡಬೇಡಿ.
  • ರಾತ್ರಿ ಚಾರ್ಜ್ ಹಾಕಿ ಮಲಗುವ ಅಭ್ಯಾಸವಿದ್ದರೆ ಬಿಟ್ಟು ಬಿಡಿ. ರಾತ್ರಿಯಿಂದ ಬೆಳಗ್ಗೆವರೆಗೂ  ಮೊಬೈಲ್ ಚಾರ್ಜ್ ಹಾಕಿ ಮಲಗುವ ಅಭ್ಯಾಸ ಬಹಳ ಜನರಿಗಿದೆ.
  • ದಿಂಬಿನಡಿಯಲ್ಲಿ ಚಾಜಿಂಗ್ ಹಾಕಿ ಮಲಗಬೇಡಿ.
  • ನೀರಿನಲ್ಲಿ ಬಿದ್ದ ಫೋನ್ ನ್ನು ಪರಿಶೀಲಿಸಿದ ನಂತರವೇ ಬಳಸಿ
  • ಚಾರ್ಜಿಂಗ್ ಕಡಿಮೆ ಇರುವಾಗ ಮಾತನಾಡುವುದು, ಅಥವಾ ಗೇಮ್ ಆಡುವುದು ಮಾಡಿದರೆ ಬ್ಯಾಟರಿ ಹಾನಿಗೊಳಗಾಗುತ್ತದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss