ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮಗೆ ಹೈ ಬಿಪಿ ಸಮಸ್ಯೆ ಇದ್ಯಾ? ಮಾತ್ರೆ ನುಂಗದೇ ಹೈ ಬಿಪಿ ನಿಯಂತ್ರಿಸಲು ಈ ಸಲಹೆಗಳನ್ನು ಅನುಸರಿಸಿ…

ರಕ್ತದೊತ್ತಡ ಹೆಚ್ಚಾದರೂ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಕಡಿಮೆ ರಕ್ತದೊತ್ತಡ ಇದ್ದರು ಆರೋಗ್ಯ ಹದಗೆಡುತ್ತದೆ. ಸಮ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ರಕ್ತದೊತ್ತಡ ಹೆಚ್ಚಾದರೆ ಶುಗರ್, ಹೃದಯ ಸಂಬಂಧಿ ರೋಗ, ಕ್ಯಾನ್ಸರ್ ಮುಂತಾದ ಕಾಯಿಲೆಗಳು ಬರುತ್ತದೆ. ಅಧಿಕ ರಕ್ತದೊತ್ತಡ ನಿಯಂತ್ರಿಸಲು ಇಲ್ಲಿ ಸಿಂಪಲ್ ಟಿಪ್ಸ್. ಅವುಗಳನ್ನು ಟ್ರೈ ಮಾಡಿ.

ಉಪ್ಪು:
ಉಪ್ಪಿನಲ್ಲಿ ಸೋಡಿಯಂ ಅಂಶ ಹೆಚ್ಚಿರುತ್ತದೆ. ಹೆಚ್ಚು ಉಪ್ಪು ಸೇವಿಸಿದರೆ ರಕ್ತದೊತ್ತಡ ಹೆಚ್ಚುತ್ತದೆ. ಉಪ್ಪಿನ ಮೂಲಕ ನಮ್ಮ ದೇಹದಲ್ಲಿರುವ ಸೋಡಿಯಂ ಹೀರಿಕೊಳ್ಳುತ್ತದೆ. ಉಪ್ಪು ಕಡಿಮೆ ತಿಂದರೆ ಹೈ ಬಿಪಿ ನಿಯಂತ್ರಣಕ್ಕೆ ಬರುತ್ತದೆ

ಬಿಪಿ ಪರೀಕ್ಷೆ
ಹೈ ಬಿಪಿ ಇರುವವರು ಪದೇ ಪದೆ ವೈದ್ಯರಲ್ಲಿ ಚೆಕ್ ಮಾಡಿಸುತ್ತಿರಬೇಕು. ಏಕೆಂದರೆ ರಕ್ತದೊತ್ತಡದ ಏರು ಪೇರುಗಳನ್ನು ತಿಳಿದುಕೊಂಡು ಇದರಿಂದ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

ಆರೋಗ್ಯಕರ ಆಹಾರ:
ಹೆಚ್ಚಿನ ಕೊಲೆಸ್ಟ್ರಾಲ್ ಇರುವ ಆಹಾರ, ಅಧಿಕ ಕೊಬ್ಬು ಇರುವ ಆಹಾರ ವ್ಯಕ್ತಿಯೊಬ್ಬನಲ್ಲಿ ಬಿಪಿಯನ್ನು ಹೆಚ್ಚಿಸುತ್ತದೆ. ಕೆಲವೊಂದು ಹಣ್ಣು, ಆಹಾರ ಪದಾರ್ಥಗಳು ಬಿಪಿ ಲೆವೆಲ್ ಹೆಚ್ಚಿಸುತ್ತದೆ. ಅಂತಹ ಪದಾರ್ಥಗಳನ್ನು ಕಡಿಮೆ ಮಾಡಬೇಕು.

ತೂಕ ಕಡಿಮೆ:
ಬೊಜ್ಜು ದೇಹ ಹೊಂದಿರುವಂತಹ ಹೆಚ್ಚಿನ ಜನರಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆಯು ಸಾಮಾನ್ಯ ವಾಗಿ ಇರುತ್ತದೆ. ಹೀಗಾಗಿ ಆರೋಗ್ಯಕಾರಿ ತೂಕ ಕಾಪಾಡಿಕೊಂಡರೆ ಆಗ ಹೃದಯದ ಆರೋಗ್ಯವೂ ಚೆನ್ನಾಗಿರುವುದು. ತೂಕ ಇಳಿಸಿದರೆ ಅದರಿಂದ ರಕ್ತನಾಳಗಳು ಸುಲಭವಾಗಿ ಹಿಗುವುದು ಮತ್ತು ಹೃದಯವು ರಕ್ತವನ್ನು ಪರಿಣಾಮಕಾರಿ ಆಗಿ ಪಂಪ್ ಮಾಡಲು ನೆರವಾಗುವುದು.

ವ್ಯಾಯಾಮ:
ವ್ಯಾಯಾಮ ಮಾಡಿದರೆ ನಿಮ್ಮ ದೇಹದಲ್ಲಿನ ಉದ್ವೇಗ, ಒತ್ತಡವನ್ನು ಕಡಿಮೆ ಮಾಡುತ್ತದೆ. ವ್ಯಾಯಾಮ ನಿಮ್ಮ ದೇಹದಲ್ಲಿ ಒಳ್ಳೆಯ ಭಾವನೆ ಮೂಡಿಸುವ ಹಾರ‍್ಮೋನ್‌ಗಳನ್ನು ಉತ್ವತ್ತಿ ಮಾಡುತ್ತದೆ. ಉದ್ವೇಗ ಕಡಿಮೆ ಮಾಡಿ ಹೈಬಿಪಿ ಸಮಸ್ಯೆ ನಿಯಂತ್ರಿಸುತ್ತದೆ.

ಬಿಸಿಲು ಕಾಯಿಸುವುದು:
ದೇಹದ ಚರ್ಮದಲ್ಲಿರುವ ನೈಟ್ರಿಕ್ ಆಕ್ಸೈಡ್ ರಕ್ತದೊತ್ತಡವನ್ನು ನಿಭಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಚರ್ಮವನ್ನು ಸೂರ್ಯನತ್ತ ಒಡ್ಡಿದ್ದಾಗ, ನೈಟ್ರಿಕ್ ಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಒಸರುವ ಮೂಲಕ ರಕ್ತದ ಕಣಗಳು ಹಿಗ್ಗುತ್ತವೆ. ಇದು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಣಕ್ಕೆ ತರುವಲ್ಲಿ ಸಹಾಯಕಾರಿಯಾಗಿದೆ.

ಧೂಮಪಾನ ಮಾಡಬೇಡಿ:
ಸಿಗರೇಟ್‌ಗಳಲ್ಲಿ ಇರುವ ನಿಕೊಟಿನ್ ನಿಮ್ಮ ದೇಹದಲ್ಲಿ ಅಡ್ರಿನಾಲಿನ್ ಸ್ರವಿಕೆಯನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ಬಡಿತ, ರಕ್ತದ ಒತ್ತಡ ಜಾಸ್ತಿಯಾಗುತ್ತದೆ. ಇದರಿಂದಲೂ ಹೃದಯದ ಕೆಲಸ ಕಠಿಣವಾಗುತ್ತದೆ. ಧೂಮಪಾನದಿಂದ ದೂರವಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss