HEALTH| ದುಃಸ್ವಪ್ನದಿಂದ ದೂರವಿರಲು ಈ ಆಹಾರ ಚರ್ಯೆ ಅನುಸರಿಸಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅನೇಕರಿಗೆ ಅನೇಕ ರೀತಿಯ ಅನುಭವಗಳು ರಾತ್ರಿಯಲ್ಲಾಗುತ್ತವೆ. ಕೆಲವರಿಗೆ ದುಸ್ವಪ್ನಗಳು ಬಂದರೆ ಇನ್ನು ಕೆಲವರಿಗೆ ಉತ್ತಮ ಸ್ವಪ್ನಗಳು ಕಂಡು ಬರುತ್ತವೆ. ಮನುಷ್ಯನ ಆಯಸ್ಸು ಹೆಚ್ಚಾದಂತೆ ಕನಸುಗಳು ಬೀಳುವುದು ಕಡಿಮೆ ಎನ್ನುವುದು ವೈಜ್ಞಾನಿಕ ವಿಶ್ಲೇಷಣೆ. ಕೆಲವರಿಗೆ ಕನಸಿನಲ್ಲಿ ಕೆಟ್ಟ ಕನಸುಗಳು ಬೀಳುತ್ತವೆ. ಭೀಕರ, ಭಯಾನಕ ಅಂಶಗಳು ಕನಸಿನಲ್ಲಿ ಕಂಡು ಬೆಚ್ಚಿ ಬೀಳುವ ಮಂದಿಯೂ ಇದ್ದಾರೆ. ನೀರು, ಬೆಂಕಿ, ದೆವ್ವ, ಭೂತ, ಸಾವು, ಹೀಗೆ ಅನೇಕ ರೀತಿಯ ಸ್ವಪ್ನಗಳಿಂದ ಮನಸ್ಸು ವಿಚಲಿತವಾಗುವಂತೆ ಮಾಡುತ್ತದೆ. ಅನೇಕರು ಇಂತಹ ಕನಸಿನಿಂದ ಕುಗ್ಗಿ ಹೋಗುತ್ತಾರೆ. ಮಾನಸಿಕ ಹಿಂಸೆ ಅನುಭವಿಸುತ್ತಾರೆ. ಈ ರೀತಿಯ ದುಸ್ವಪ್ನಗಳಿಗೆ ನಾವು ಸೇವಿಸುವ ಆಹಾರವೂ ಒಂದು ಕಾರಣ ಎನ್ನಲಾಗುತ್ತದೆ.

ಸಿಹಿಗೆಣಸು, ಕುಚ್ಚಲಕ್ಕಿ, ಧಾನ್ಯಗಳ ಬ್ರೆಡ್‌ ಹೀಗೆ ಸಂಕೀರ್ಣ ಕಾರ್ಬೋಹೈಡ್ರೇಟ್‌ ಅಂಶ ಹೊಂದಿರುವ ಆಹಾರ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ಸ್ಥಿರಗೊಳಿಸಿ ಆರೋಗ್ಯವನ್ನು ಸರಿಯಾಗಿಡಲು ಸಹಾಯ ಮಾಡುತ್ತದೆ. ಇದರಿಂದ ದುಃಸ್ವಪ್ನ ದೂರವಾಗುತ್ತದೆ. ಮಲಗುವ ಮೊದಲು ಹಾಲು, ಮೊಸರು ಸೇರಿದಂತೆ ಕ್ಯಾಲ್ಸಿಯಂ ಅಂಶ ಹೊಂದಿದ ಆಹಾರ ಸೇವಿಸುವುದರಿಂದ ದುಃಸ್ವಪ್ನ ದೂರವಾಗುತ್ತದೆ. ಬಾಳೆಹಣ್ಣುಗಳು, ಬೀಜಗಳು, ಮತ್ತು ಧಾನ್ಯಗಳು ವಿಟಮಿನ್ ಬಿ 6 ಹೊಂದಿರುವ ಸಮೃದ್ಧ ಆಹಾರ ಪದಾರ್ಥಗಳು. ವಿಟಮಿನ್ ಬಿ 6 ದೇಹವು ಸಿರೊಟೋನಿನ್ ಉತ್ಪಾದಿಸಲು ಸಹಾಯ ಮಾಡುತ್ತದೆ, ಇದು ಉತ್ತಮ ನಿದ್ರೆಗೆ ಸಹಕಾರಿಯಾಗುತ್ತದೆ. ಇದರಿಂದ ದುಃಸ್ವಪ್ನ ದೂರವಾಗುತ್ತದೆ.

ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ದೇಹದ ಉಷ್ಣತೆ ಹೆಚ್ಚಾಗಿ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಇದರಿಂದ ದುಃಸ್ವಪ್ನ ಕಾಣುವ ಸಾಧ್ಯತೆಯಿದೆ. ಹಾಗಾಗಿ ಮಸಾಲೆಯುಕ್ತ ಆಹಾರ ಸೇವಿಸುವುದರಿಂದ ದೂರವಿರಿ. ಕೆಫೀನ್‌ಯುಕ್ತ ಅಂಶವೂ ನಿದ್ರೆಗೆ ಅಡ್ಡಿಪಡಿಸುತ್ತಿದುದ ದುಃಸ್ವಪ್ನಗಳಿಗೆ ಕಾರಣವಾಗುತ್ತದೆ. ಮಲಗುವ ಗಂಟೆಯ ಮೊದಲು ಕೆಫೀನ್‌ಯುಕ್ತ ಕಾಫಿ ಚಹಾ ಸೇವನೆ ಮಾಡದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!