ಹೊಸದಿಗಂತ ಡಿಜಿಟಲ್ ಡೆಸ್ಕ್:
ಥಾಯ್ ಪನೀರ್ ಟೋಸ್ಟ್ ಒಂದು ಸ್ವಾದಿಷ್ಟ ಮತ್ತು ರುಚಿಕರವಾದ ಸ್ನ್ಯಾಕ್ ಆಗಿದ್ದು, ಇದು ಚಹಾ ಅಥವಾ ಸಂಜೆ ತಿಂಡಿಗೆ ಪರಿಪೂರ್ಣವಾದ ಆಯ್ಕೆಯಾಗಿದೆ. ಪನೀರ್ ಪ್ರಿಯರಿಗೆ ಇದು ಹೊಸ ಶೈಲಿಯ ರುಚಿ ನೀಡುತ್ತದೆ.
ಬೇಕಾಗುವ ಸಾಮಗ್ರಿಗಳು:
ಪನೀರ್ – 200 ಗ್ರಾಂ
ಎಣ್ಣೆ – 1 ಟೀ ಸ್ಪೂನ್
ಬೆಳ್ಳುಳ್ಳಿ – 3-4 ಎಸಳು
ಹಸಿಮೆಣಸು – 1
ಕ್ಯಾಪ್ಸಿಕಂ – 1
ಸೋಯಾ ಸಾಸ್ – 1 ಟೀ ಸ್ಪೂನ್
ರೆಡ್ ಚಿಲ್ಲಿ ಸಾಸ್ – 1 ಟೀ ಸ್ಪೂನ್
ಟೊಮಾಟೋ ಸಾಸ್ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಬ್ರೆಡ್ ಸ್ಲೈಸ್ – 4-6
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಚೀಸ್ – 2 ಟೇಬಲ್ ಸ್ಪೂನ್
ತಯಾರಿಸುವ ವಿಧಾನ:
ಪ್ಯಾನ್ನಲ್ಲಿ ಎಣ್ಣೆ ಹಾಕಿ ಅದಕ್ಕೆ ಬೆಳ್ಳುಳ್ಳಿ ಮತ್ತು ಹಸಿಮೆಣಸನ್ನು ಹಾಕಿ ಸ್ವಲ್ಪ ಬಾಡಿಸಿ. ನಂತರ ಕ್ಯಾಪ್ಸಿಕಂ ಸೇರಿಸಿ 2 ನಿಮಿಷ ಫ್ರೈ ಮಾಡಿ. ಈಗ ಪನೀರ್ ತುಂಡುಗಳನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ ಸೋಯಾ ಸಾಸ್, ರೆಡ್ ಚಿಲ್ಲಿ ಸಾಸ್, ಟೊಮಾಟೋ ಸಾಸ್ ಮತ್ತು ಉಪ್ಪು ಸೇರಿಸಿ, 3-4 ನಿಮಿಷ ಚೆನ್ನಾಗಿ ಬಾಡಿಸಿ.
ನಂತರ ಬ್ರೆಡ್ ಮೇಲೆ ಈ ಮಿಶ್ರಣವನ್ನು ಹರಡಿ ಅದರ ಮೇಲೆ ಚೀಸ್ ಹಾಕಿ ತವಾದ ಮೇಲೆ ತಳಭಾಗ ಕ್ರಿಸ್ಪಿಯಾಗಿ ಬರುವರೆಗೆ ಫ್ರೈ ಮಾಡಿದರೆ ಥಾಯ್ ಪನೀರ್ ಟೋಸ್ಟ್ ರೆಡಿ.