ಕೆಲವೊಮ್ಮೆ ಮನೆಯಲ್ಲಿ ಚಪಾತಿ ಉಳಿದಿರುತ್ತೆ ಅದನ್ನ ಏನ್ ಮಾಡೋದು ಅಂತ ಯೋಚ್ನೆ ಮಾಡ್ತಿದ್ರೆ ಇಲ್ಲಿದೆ ಹೊಸ ರೆಸಿಪಿ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು
ಚಪಾತಿ
ರೆಡ್ ಚಿಲ್ಲಿ ಸಾಸ್: 4 ಟೀ ಚಮಚ
ತುಪ್ಪ: ಸ್ವಲ್ಪ
ಸಣ್ಣದಾಗಿ ಕತ್ತರಿಸಿದ ಸೌತೆಕಾಯಿ: 1/4 ಕಪ್
ಸಣ್ಣದಾಗಿ ಕತ್ತರಿಸಿದ ಟೊಮೆಟೊ: 1/4 ಕಪ್
ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು: ಸ್ವಲ್ಪ
ತುರಿದ ಕ್ಯಾರೆಟ್: 1/4 ಕಪ್
ನುಣ್ಣಗೆ ಕತ್ತರಿಸಿದ ಎಲೆಕೋಸು: 1/4 ಕಪ್
ಸಣ್ಣದಾಗಿ ಹೆಚ್ಚಿದ ಸ್ಪ್ರಿಂಗ್ ಆನಿಯನ್: 1/4 ಕಪ್
ಟೊಮೆಟೊ ಕೆಚಪ್: 1 ಟೀ ಚಮಚ
ಮೇಯೋ: 2 ಟೀ ಚಮಚ
ಚೀಸ್: 6, ಚೀಸ್ ಸ್ಪ್ರೆಡ್: 2 ಟೀ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಪ್ರತಿ ಚಪಾತಿಗೆ ಅರ್ಧ ಟೀ ಚಮಚ ರೆಡ್ ಚಿಲ್ಲಿ ಸಾಸ್ ಹಾಗೂ ಮೇಯೋ ಹರಡಿ. ಈಗ ಈ ಚಪಾತಿ ಮಧ್ಯಕ್ಕೆ ತರಕಾರಿ ಮಿಶ್ರಣವನ್ನು ಹಾಕಿ ರೋಲ್ ಮಾಡಿ. ನಂತರ ತವಾಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ ಈ ರೋಲ್ ಮಾಡಿದ ಚಪಾತಿಯನ್ನು ಸ್ವಲ್ಪ ಫ್ರೈ ಮಾಡಿದರೆ ರೋಲ್ ರೆಡಿ.