ಬೇಕಾಗುವ ಸಾಮಾಗ್ರಿಗಳು
ಉಳಿದ ಚಪಾತಿ-5
ಈರುಳ್ಳಿ-1
ಹಸಿ ಮೆಣಸಿನಕಾಯಿ-2
ಟೊಮ್ಯಾಟೋ-1
ಒಗ್ಗರಣೆಗೆ ಉದ್ದಿನ ಬೇಳೆ, ಜೀರಿಗೆ, ಕಡಲೇ ಬೇಳೆ ತಲಾ 1 ಚಮಚ, ಕರಿಬೇವು , ಕೊತ್ತಂಬರಿ ಸೊಪ್ಪು
ಎಣ್ಣೆ-4 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಚಪಾತಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಬಿಸಿ ಎಣ್ಣೆಗೆ ಕರಿಬೇವು, ಜೀರಿಗೆ, ಹಸಿಮೆಣಸಿನಕಾಯಿ, ಉದ್ದಿನಬೇಳೆ ಮತ್ತು ಕಡಲೇ ಬೇಳೆ ಒಗ್ಗರಣೆ ರೆಡಿ ಮಾಡಿ.
ಈರುಳ್ಳಿ ಮತ್ತು ಟೊಮ್ಯಾಟೊ ಹಾಕಿ ಫ್ರೈ ಮಾಡಿ. ನಂತರ ಮೂರು ಕಪ್ ನೀರು, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ. ನಂತರ ಚಪಾತಿ ತುಂಡುಗಳನ್ನು ಹಾಕಿ ಕಡಿಮೆ ಉರಿಯಲ್ಲಿ ಎಂಟು ನಿಮಿಷ ಬೇಯಿಸಿ. ಇದೀಗ ಟೇಸ್ಟಿ ಚಪಾತಿ ಉಪ್ಪಿಟ್ಟು ಸವಿಯಲು ಸಿದ್ದ.