ಚಾಕೋಲೆಟ್ ಎಂದರೆ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಬಾಯಲ್ಲಿ ನೀರು ಬರುತ್ತೆ. ಇಂದು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಚಾಕೋಲೆಟ್‌ಗಳು ಸಿಗುತ್ತವೆ ಆದರೆ ಮನೆಯಲ್ಲಿಯೇ ತಯಾರಿಸಿದ ಚಾಕೋಲೆಟ್ ಆರೋಗ್ಯಕರವೂ ಆಗಿರುತ್ತದೆ ಹಾಗೂ ನಮಗೆ ಬೇಕಾದ ಆಕಾರದಲ್ಲಿ ಮಾಡಿಕೊಳ್ಳಬಹುದು.
ಬೇಕಾಗುವ ಪದಾರ್ಥಗಳು:
ಕೋಕೋ ಪುಡಿ – ½ ಕಪ್
ಬೆಣ್ಣೆ – ¼ ಕಪ್
ಸಕ್ಕರೆ ಪುಡಿ – ¼ ಕಪ್ (ರುಚಿಗೆ ತಕ್ಕಷ್ಟು)
ವೆನಿಲ್ಲಾ ಎಸ್ಸೆನ್ಸ್ – ½ ಟೀ ಸ್ಪೂನ್
ಒಂದು ಚಿಟಿಕೆ ಉಪ್ಪು
ಹಾಲಿನ ಪುಡಿ – 2 ಸ್ಪೂನ್
ತಯಾರಿಸುವ ವಿಧಾನ
ಮೊದಲು ಕೋಕೋ ಪುಡಿ, ಹಾಲಿನ ಪುಡಿ ಮತ್ತು ಪುಡಿ ಸಕ್ಕರೆಯನ್ನು ಚೆನ್ನಾಗಿ ಮಿಕ್ಸಿಯಲ್ಲಿ ಬ್ಲೆಂಡ್ ಮಾಡಿಕೊಳ್ಳಿ. ಈಗ ಒಂದು ಬಾಣಲೆಯಲ್ಲಿ ಬೆಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಕರಗಿಸಿಕೊಳ್ಳಿ.
ಕರಗಿದ ಬೆಣ್ಣೆಗೆ ಕೋಕೋ ಮತ್ತು ಸಕ್ಕರೆಯ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಯಾವುದೇ ಗಂಟುಗಳಿಲ್ಲದಂತೆ ಕಲಸಿಕೊಳ್ಳಿ. ಅದಕ್ಕೆ ಈಗ ವೇನಿಲ್ಲಾ ಎಸನ್ಸ್ ಮತ್ತು ಉಪ್ಪು ಸೇರಿಸಿ, ಮತ್ತೊಮ್ಮೆ ಚೆನ್ನಾಗಿ ಕಲಸಿ.
ಈ ಮಿಶ್ರಣವನ್ನು ಒಂದು ಚಾಕೊಲೆಟ್ ಅಚ್ಚಿಗೆ ಸುರಿದು, 1-2 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇಟ್ಟರೆ ಸಿಂಪಲ್ ಚಾಕೋಲೆಟ್ ರೆಡಿ.