FOOD | ಸೆಖೆಗೆ ತಂಪಾಗಿರೋದು ಏನಾದ್ರು ತಿನ್ಬೇಕು ಅಂದ್ರೆ ಈ ಮೊಸರು ವಡೆ ಟ್ರೈ ಮಾಡಿ!

ಮೃದುವಾದ ವಡೆಯನ್ನು ಮೊಸರಿನಲ್ಲಿ ನೆನೆಸಿ ತಿಂದರೆ ಅದರ ರುಚಿಯೇ ಬೇರೆ. ಸಿಹಿ-ಹುಳಿ ಮಿಶ್ರಣದ ಈ ಮೊಸರು ವಡೆ ಮಾಡೋದು ತುಂಬಾ ಸುಲಭ.

ಬೇಕಾಗುವ ಪದಾರ್ಥಗಳು

ಉದ್ದಿನ ಬೇಳೆ- 1 ಕಪ್
ಹಸಿ ಮೆಣಸಿನಕಾಯಿ – 1 ಅಥವಾ 2
ಶುಂಠಿ – 1/2 ಇಂಚು
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ದಪ್ಪ ಮೊಸರು – 2 ಕಪ್
ಸಕ್ಕರೆ – ಅರ್ಧ ಚಮಚ
ಕಾಳುಮೆಣಸು- 1/2 ಚಮಚ
ನೀರು – 1/2 ಕಪ್
ಚಿಲ್ಲಿ ಸಾಸ್ – 2 ಚಮಚ
ಟೊಮೆಟೊ ಸಾಸ್ – 2 ಚಮಚ
ಕೊತ್ತಂಬರಿ ಪುಡಿ – 1/2 ಚಮಚ
ಹುರಿದ ಜೀರಿಗೆ ಪುಡಿ – 1/2 ಚಮಚ
ಖಾರ ಮೆಣಸಿನ ಪುಡಿ- 1/2 ಚಮಚ
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಚಮಚ
ಕಡಲೆಹಿಟ್ಟಿನ ಬೂಂದಿ ಸ್ವಲ್ಪ

ತಯಾರಿಸುವ ವಿಧಾನ

ಉದ್ದಿನ ಬೇಳೆಯನ್ನು ಅಥವಾ ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ನಂತರ ನೆನೆಸಿದ ಬೇಳೆಯನ್ನು ಮಿಕ್ಸರ್ ಜಾರ್‌ನಲ್ಲಿ ಹಾಕಿ. ಅಗತ್ಯವಿದ್ದರೆ, ಸ್ವಲ್ಪ ನೀರನ್ನು ಹಾಕಿ ನಯವಾಗಿ ರುಬ್ಬಿ.

ಈಗ ಒಂದು ಪಾತ್ರೆಯಲ್ಲಿ ರುಬ್ಬಿರುವ ಹಿಟ್ಟು, ನುಣ್ಣಗೆ ಕತ್ತರಿಸಿದ ಹಸಿಮೆಣಸು, ತುರಿದ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ, ಉರಿಯನ್ನು ಕಡಿಮೆ ಮಾಡಿ. ಅದರಲ್ಲಿ ಸ್ವಲ್ಪ ಹಿಟ್ಟನ್ನು ಚಮಚ ಅಥವಾ ಒದ್ದೆಯಾದ ಕೈಯಿಂದ ಸಣ್ಣ ವಡೆಯಂತೆ ಹಾಕಿ ಫ್ರೈ ಮಾಡಿ.

ಒಂದು ಬಟ್ಟಲಿನಲ್ಲಿ ದಪ್ಪ ಮೊಸರನ್ನು ತೆಗೆದುಕೊಂಡು, ಅದಕ್ಕೆ ಸಕ್ಕರೆ ಮತ್ತು ಕಪ್ಪು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

ಈಗ ಒಂದು ದೊಡ್ಡ ಬಟ್ಟಲಿನಲ್ಲಿ ತಣ್ಣೀರನ್ನು ತೆಗೆದುಕೊಂಡು, ಅದರಲ್ಲಿ ಹುರಿದ ವಡೆಗಳನ್ನು ಸೇರಿಸಿ. 10 ರಿಂದ 15 ನಿಮಿಷಗಳ ಕಾಲ ನೆನೆಸಿಡಿ. ನೆನೆಸಿದ ವಡೆಗಳನ್ನು ಒಂದೊಂದಾಗಿ ತೆಗೆದುಕೊಂಡು ಅವುಗಳನ್ನು ಎರಡೂ ಅಂಗೈಗಳ ಮಧ್ಯದಲ್ಲಿ ಇರಿಸಿ ಒತ್ತಿಕೊಳ್ಳಿ.

ಒತ್ತಿದ ಎಲ್ಲಾ ವಡೆಗಳನ್ನು ಒಂದು ತಟ್ಟೆಯಲ್ಲಿ ಹಾಕಿ, ಅದರ ಮೇಲೆ ಮೊಸರು ಹಾಕಿ. ನಂತರ ಮಸಾಲೆಯುಕ್ತ ಚಟ್ನಿ ಕೆಚಪ್, ಸಾಸ್‌ನಂತಹ ನಿಮಗೆ ಬೇಕಾದ ಸಿಹಿ ಚಟ್ನಿಗಳನ್ನು ಸೇರಿಸಿ. ಮೆಣಸಿನ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲೆ, ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಗೂ ಬೂಂದಿಯಿಂದ ಅಲಂಕರಿಸಿದರೆ ಮೊಸರು ವಡೆ ರೆಡಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!