ಸಂಜೆ ಆಗ್ತಿದಂತೆ ಬಿಸಿ ಬಿಸಿಯಾಗಿ ತಿನ್ನೋಕೆ ಏನಾದ್ರು ಬೇಕು ಅಂದಾಗ ಈ ಸಿಂಪಲ್ ಚಿಕನ್ ಸೂಪ್ ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು:
ಚಿಕನ್ ತುಂಡುಗಳು
ಈರುಳ್ಳಿ – ಒಂದು
ಜೀರಿಗೆ – ಒಂದು ಚಮಚ
ಕೊತ್ತಂಬರಿ – ಎರಡು ಚಮಚ
ಮೆಣಸು – ಅರ್ಧ ಚಮಚ
ದಾಲ್ಚಿನ್ನಿ – ಸಣ್ಣ ತುಂಡು
ಲವಂಗ – ನಾಲ್ಕು
ಶುಂಠಿ – ಸಣ್ಣ ತುಂಡು
ಕ್ಯಾರೆಟ್ – ಒಂದು
ಆಲೂಗಡ್ಡೆ – ಒಂದು
ಮೆಣಸಿನಕಾಯಿ – ಎರಡು
ನೀರು – ಅರ್ಧ ಲೀಟರ್
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ – ಒಂದೂವರೆ ಚಮಚ
ಏಲಕ್ಕಿ – ಮೂರು
ಲವಂಗ – ಮೂರು
ಬಿರಿಯಾನಿ ಎಲೆಗಳು – ಎರಡು
ಪುದೀನ
ಧನಿಯಾ ಪೌಡರ್
ಕಾರ್ನ್ ಫ್ಲೋರ್ – ಎರಡು ಚಮಚ
ಮಾಡುವ ವಿಧಾನ
ಮೊದಲಿಗೆ ಈರುಳ್ಳಿ, ಜೀರಿಗೆ, ಕೊತ್ತಂಬರಿ, ಮೆಣಸು, ದಾಲ್ಚಿನ್ನಿ, ಬೆಳ್ಳುಳ್ಳಿ ಎಸಳು, ಶುಂಠಿ ಸೇರಿಸಿ ನಯವಾದ ಪೇಸ್ಟ್ ಮಾಡಿಕೊಳ್ಳಿ. ಈಗ ಚಿಕನ್ ತುಂಡುಗಳು ಮತ್ತು ಈ ಮಸಾಲಾ ಪೇಸ್ಟ್‌ಅನ್ನು ಕುಕ್ಕರ್‌ಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕ್ಯಾರೆಟ್, ಆಲೂಗಡ್ಡೆ, ಹಸಿಮೆಣಸಿನ ತುಂಡುಗಳನ್ನು ಹಾಕಿ ಚೆನ್ನಾಗಿ ಮತ್ತೊಮ್ಮೆ ಮಿಕ್ಸ್ ಮಾಡಿ.
ಈಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಅವುಗಳನ್ನು ಕುದಿಸಲು ಅರ್ಧ ಲೀಟರ್ ನೀರು ಸೇರಿಸಿ ಕುಕ್ಕರ್ ಮುಚ್ಚಿ ನಾಲ್ಕೈದು ಸೀಟಿ ಹಾಕಿಸಿ.
ಬಾಣಲೆಗೆ ತುಪ್ಪ ಹಾಕಿ . ಜೀರಿಗೆ, ಮೆಣಸು, ಏಲಕ್ಕಿ, ಲವಂಗ, ದಾಲ್ಚಿನ್ನಿ, ಬಿರಿಯಾನಿ ಎಲೆ ಸೇರಿಸಿ ಹುರಿಯಿರಿ. ನಂತರ ಇದೆಲ್ಲವನ್ನೂ ಕುಕ್ಕರ್‌ಗೆ ಹಾಕಿ, ಮೇಲೆ ಪುದೀನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಇದು ಬೇಯುತ್ತಿರುವಾಗಲೇ ಸ್ವಲ್ಪ ನೀರು ತೆಗೆದುಕೊಂಡು ಅದರಲ್ಲಿ ಎರಡು ಚಮಚ ಕಾರ್ನ್ ಫ್ಲೋರ್ ಅನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಹಾಕಿ.
ಈಗ ಸೂಪ್ ಸ್ವಲ್ಪ ದಪ್ಪವಾಗಿರುತ್ತದೆ. ನಂತರ ಒಲೆ ಆಫ್ ಮಾಡಿದರೆ ಬಿಸಿ ಬಿಸಿಯಾದ ಚಿಕನ್ ಸೂಪ್ ರೆಡಿ.