ನೀವು ಕೋಪಿಷ್ಟರೇ..? ಇದನ್ನು ಫಾಲೋ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೋಪವು ಮಾನಸಿಕ ಆರೋಗ್ಯದ ಮೇಲೆ ಆಳವಾದ ಪರಿಣಾಮವನ್ನು ಬೀರುವುದು ಮಾತ್ರವಲ್ಲದೆ ಅನೇಕ ಸಮಸ್ಯೆಗಳನ್ನು ಹೊತ್ತು ತರುತ್ತದೆ. ನಾವು ತಿನ್ನುವ ಆಹಾರಕ್ಕೂ ಕೋಪಕ್ಕೂ ನಿಕಟ ಸಂಬಂಧವಿದೆ. ಹಸಿದವರಿಗೆ ಸಿಟ್ಟು ತಾರಕಕ್ಕೇರಿರುತ್ತದೆ. ರಕ್ತದಲ್ಲಿ ಗ್ಲೂಕೋಸ್ ಕಡಿಮೆಯಾದಾಗ ಕೋಪ ಮತ್ತು ತಳಮಳ ಹೆಚ್ಚಾಗುತ್ತದೆ.

ಆರೋಗ್ಯಕರ ಸಮತೋಲನ ಆಹಾರ ಸೇವನೆಯು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಮುಖ್ಯವಾಗಿ ಕಾರ್ಬೋಹೈಡ್ರೇಟ್‌ಗಳು ಗ್ಲೂಕೋಸ್ ಮತ್ತು ಮೆದುಳಿನ ಕಾರ್ಯವನ್ನು ನಿಯಂತ್ರಿಸುತ್ತದೆ. ಜೀವಸತ್ವಗಳು ಮತ್ತು ಖನಿಜಗಳು ಶಾಂತ ನಡವಳಿಕೆ ಮತ್ತು ಮೆದುಳಿನ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ತಾಜಾ ಹಣ್ಣುಗಳು, ತರಕಾರಿ, ಬೀಜಗಳು ವಿಟಮಿನ್‌, ಖನಿಜ, ಕೊಬ್ಬಿನಾಮ್ಲ ಪೂರಕ ಆಹಾರ ಸೇವಿಸುವ ಮೂಲಕ ಕೋಪ ಕಡಿಮೆ ಮಾಡಿಕೊಳ್ಳಿ.

ಹಗಲಿನಲ್ಲಿ ಸಂಭವಿಸುವ ಘರ್ಷಣೆಗಳು, ಭಿನ್ನಾಭಿಪ್ರಾಯಗಳು ಮಲಗುವ ಸಮಯದಲ್ಲಿ ಪದೇ ಪದೇ ನೆನೆಪಿಗೆ ಕೋಪ ತರಿಸುವುದರ ಜೊತೆಗೆ ಮನಶಾಂತಿಯನ್ನು ಹಾಳು ಮಾಡುತ್ತದೆ. ಅನಗತ್ಯ ವಿಷಯಗಳನ್ನು ಬಿಟ್ಟುಬಿಡುವುದು ಉತ್ತಮ ಎಂದು ತಜ್ಞರು ಸೂಚಿಸುತ್ತಾರೆ. ರಾತ್ರಿ ವೇಳೆ ಪುಸ್ತಕ ಓದುವುದು, ಸಂಗೀತ ಕೇಳುವುದು ಮೂಲಕ ಮನಸ್ಸು ಉಲ್ಲಾಸಮಯವಾಗಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!