ಆರೋಗ್ಯಕರ ಜೀವನಕ್ಕೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವೆಲ್ಲಾ ಆಹಾರಗಳನ್ನು ಸೇವಿಸಬಹುದು ಗೊತ್ತಾ? ದಿನವೆಲ್ಲಾ ಕೆಲಸದ ಒತ್ತಡದಲ್ಲಿರುವವರಿಗೆ ಬೆಳಗಿನ ತಿಂಡಿ ಸೇವಿಸದೇ ನಿರ್ಲಕ್ಷಿಸುವುದು ಒಳ್ಳೆಯದಲ್ಲಾ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವ ಆಹಾರ ಸೇವಿಸಬಹುದು ಅಂತ ನೋಡಿ..
ಬಾದಾಮಿ: ಇದರಲ್ಲಿರುವ ವಿಟಮಿನ್ ಇ, ಪ್ರೋಟೀನ್, ನಾರಿನಾಂಶ ಗಳು ಹೆಚ್ಚಾಗಿರುತ್ತದೆ. ಇದನ್ನು ಹಿಂದಿನ ದಿನದ ರಾತ್ರಿ ನೆನೆಯಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.
ಜೇನುತುಪ್ಪ, ನೀರು: ಬೆಚ್ಚಗಿನ ನೀರಿಗೆ ಜೇನುತುಪ್ಪ ಬೆರಸಿ ಸೇವಿಸುವುದರಿಂದ ಇದು ನಮ್ಮ ಹೊಟ್ಟೆಯಲ್ಲಿರುವ ಟಾಕ್ಸಿನ್ಸ್ ಗಳನ್ನು ನಾಶ ಮಾಡುತ್ತದೆ. ಜೇನುತುಪ್ಪದಲ್ಲಿರುವ ವಿಟಮಿನ್ಸ್ , ಮಿನರಲ್ಸ್ ಗಳು ಹೆಚ್ಚಾಗಿ ಇರುತ್ತದೆ. ಇದು ನಮ್ಮ ಇಡೀ ದಿನವನ್ನು ಫ್ರೆಶ್ ಆಗಿರಿಸುತ್ತದೆ.
ನೆಲ್ಲಿಕಾಯಿ ಜ್ಯೂಸ್: ಇದರಲ್ಲಿ ಅಧಿಕ ವಿಟಮಿನ್ ಸಿ ಅಂಶಗಳು ಹೆಚ್ಚಾಗಿದ್ದು, ನಮ್ಮ ಇಮ್ಯುನಿಟಿಯನ್ನು ಹೆಚ್ಚಿಸುತ್ತದೆ. ಇದರಿಂದ ತ್ವಚೆಯ ಕಾಂತಿ ವೃದ್ಧಿಯಾಗುತ್ತದೆ. ಕೂದಲಿಗೆ ಹಾಗೂ ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ.
ಗೋದಿಹುಲ್ಲಿನ ನೀರು: ಗೋದಿ ಹುಲ್ಲಿನ ಪುಡಿ ಹಾಗೂ ನೀರನ್ನು ಮಿಶ್ರಣ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದರಿಂದ ಮಲಬದ್ಧತೆ ಕೂಡ ನಿವಾರಣೆಯಾಗುತ್ತದೆ.
ಒಣದ್ರಾಕ್ಷಿ: ಇದು ಪೊಟಾಶಿಯಂ, ಕ್ಯಾಲ್ಶಿಯಂ, ಕಬ್ಬಿಣಾಂಶ ಹೆಚ್ಚಾಗಿದ್ದು, ರಾತ್ರಿ ನೆನೆಯಿಟ್ಟ ದಾಕ್ಷಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಲು ಸಹಕಾರಿಯಾಗಲಿದೆ.
ಪಪಾಯಿ: ಬೆಳಗ್ಗೆ ಪಪಾಯಿ ಸೇವಿಸುವುದರಿಂದ ಮಲಬದ್ಧತೆ ಕಡಿಮೆಯಾಗುವುರ ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಿಸಿ, ಹೃದಯ ಸಂಬಂಧಿ ಸಮಸ್ಯೆಗೆ ರಾಮಬಾಣವಾಗುತ್ತದೆ.