Saturday, August 13, 2022

Latest Posts

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವೆಲ್ಲ ಆಹಾರಗಳನ್ನು ಸೇವಿಸಬೇಕು ಗೊತ್ತಾ? ಇಲ್ಲಿದೆ ನೋಡಿ ಲಿಸ್ಟ್

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೇಕಾಬಿಟ್ಟಿ ಆಹಾರಗಳನ್ನು ಸೇವಿಸಬೇಡಿ. ಎಣ್ಣೆ ಆಹಾರ, ಕರಿದ ತಿಂಡಿ, ಬೇಕರಿ ತಿಂಡಿ, ಸಿಹಿ ಪದಾರ್ಥಗಳಿಂದ ಆದಷ್ಟು ದೂರವಿರಿ. ಪ್ರೊಟೀನ್, ವಿಟಮಿನ್ ಅಂಶ ಹೆಚ್ಚಿರುವ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಿ. ತುಂಬಾ ಜನರಿಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಏನೆಲ್ಲ ಆಹಾರ ಸೇವಿಸಬೇಕೆಂಬ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಅಂಥವರಿಗೆ ಇಲ್ಲಿದೆ ನೋಡಿ ಲಿಸ್ಟ್.

ನೀರಲ್ಲಿ ನೆನೆಸಿಟ್ಟ ಒಣ ದ್ರಾಕ್ಷಿ:
ಒಣ ದ್ರಾಕ್ಷಿಯನ್ನು ರಾತ್ರಿ ಮಲಗುವ ಮೊದಲು ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅದನ್ನು ಸೇವಿಸಿ. ಇದರಲ್ಲಿ  ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಹೆಚ್ಚಿರುತ್ತದೆ. ಇಡೀ ದಿನ ನಮ್ಗೆ ಬೇಕಾಗುವ ಶಕ್ತಿಯನ್ನು ಒದಗಿಸುತ್ತದೆ.

ಬಾದಾಮಿ:
ಬಾದಾಮಿಯನ್ನೂ ಕೂಡ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಸೇವಿಸಿ. ಇದರಲ್ಲಿ ಮ್ಯಾಂಗನೀಸ್, ವಿಟಮಿನ್ ಇ, ಪ್ರೋಟೀನ್, ಫೈಬರ್, ಒಮೆಗಾ-3,ಒಮೆಗಾ -6 ಕೊಬ್ಬಿನ ಆಮ್ಲಗಳು ಇರುತ್ತದೆ. ನಿಮ್ಮನ್ನು ಇಡೀ ದಿನ ಆರೋಗ್ಯವಾಗಿಡುತ್ತದೆ.

ಮೊಳಕೆ ಹೆಸರು ಕಾಳು:
ಮೊಳಕೆ ಬಂದಿರುವ ಹೆಸರು ಕಾಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಬಹಳ ಉತ್ತಮ.  ಚೆನ್ನಾಗಿ ಅಗೆದು, ಉಗುರು ಬಿಸಿ ನೀರನ್ನು  ಕುಡಿಯಬೇಕು. ಮಲಬದ್ಧತೆ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. ಅಶಕ್ತತೆ ಸಮಸ್ಯೆ ಕೂಡ ದಿನದಿಂದ ದಿನಕ್ಕೆ ಕಡಿಮೆ ಆಗುತ್ತದೆ.

ಪಪ್ಪಾಯ:
ಪಪ್ಪಾಯಿಯನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ದೇಹದ ಜೀವಾಣುಗಳನ್ನು ಶುದ್ಧೀಕರಿಸಲು ಮತ್ತು ಕರುಳಿನ ಚಲನೆಯನ್ನು ಸುಗಮಗೊಳಿಸಲು ಸಹಾಯಕವಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ನ್ನೂ ಕೂಡ ಕಡಿಮೆ ಮಾಡುತ್ತದೆ ಮತ್ತು ಹೃದ್ರೋಗಗಳನ್ನು ತಡೆಯುತ್ತದೆ. ತಿಂಡಿ ಸೇವಿಸುವ 45 ನಿಮಿಷ ಮೊದಲು ಈ ಹಣ್ಣನ್ನು ಸೇವಿಸಿ.

ಕಲ್ಲಂಗಡಿ:
ಕಲ್ಲಂಗಡಿ ಹಣ್ಣುಗಳಲ್ಲಿ 90 ಪ್ರತಿ ಶತದಷ್ಟು ನೀರು ತುಂಬಿರುತ್ತವೆ. ಇವುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ದಿನವಿಡೀ ನಮ್ಮ ದೇಹದಲ್ಲಿನ ನೀರಿನ ಕೊರತೆ ಸರಿದೂಗಿಸಿಕೊಳ್ಳುತ್ತದೆ ಮತ್ತು ಹೊಟ್ಟೆಯನ್ನು ಮೃದುವಾಗಿರುವಂತೆ ನೋಡಿಕೊಳ್ಳುತ್ತದೆ.

ಜೇನುತುಪ್ಪ- ಉಗುರು ಬಿಸಿ ನೀರು:
ಪ್ರತಿದಿನ ತಪ್ಪದೇ ಉಗುರು ಬಿಸಿ ನೀರಿಗೆ ಜೇನುತುಪ್ಪವನ್ನು ಬೆಸೆರಿಕೊಂಡು ಸೇವಿಸಿ. ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ನಮ್ಮ ದೇಹದಲ್ಲಿನ ವಿಷಕಾರಿ ಅಂಶ ಹೊರಹಾಕುತ್ತದೆ.  ಚಯಾಪಚಯ ಕ್ರೀಯೆಯನ್ನು ಅಭಿವೃದ್ಧಿಗೊಳಿಸುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss