ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ, ಕಳ್ಳತನಕ್ಕೆ ಸಂಬಂಧಿಸಿದ ವೀಡಿಯೊಗಳು ನೆಟ್‌ನಲ್ಲಿ ವೈರಲ್ ಆಗುತ್ತಿರುತ್ತವೆ. ಇವುಗಳಲ್ಲಿ ಕೆಲವು ನಗು ತರಿಸುವಂತಿದ್ದರೆ, ಕೆಲವು ಭಯಾನಕವಾಗಿರುತ್ತವೆ. ಇಂಥದ್ದೊಂದು ಕಳ್ಳತನ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಮಾಸ್ಕ್ ಹಾಕಿಕೊಂಡ ಯುವಕನೊಬ್ಬ ಬೆಂಗಳೂರಿನ ಶಾಂತಿನಗರದಲ್ಲಿರುವ ಅಪಾರ್ಟ್ಮೆಂಟ್‌ವೊಂದಕ್ಕೆ ನುಗ್ಗಿದ್ದಾನೆ. ಸಮಯ ಬೆಳಗಿನ ಜಾವ 3:45. ಮುಖಕ್ಕೆ ಮಾಸ್ಕ್ ಧರಿಸಿ ಗಂಭಿರವಾಗಿ ಬಂದ ಆತ ಎರಡು ದೊಡ್ಡ ಚೀಲಗಳನ್ನು ಕತ್ತಿಗೆ ನೇತು ಹಾಕಿಕೊಳ್ಳುತ್ತಾನೆ. ಇದನ್ನು ನೋಡಿದರೆ ಭಾರೀ ದೊಡ್ಡ ಪ್ಲಾನ್ ಮಾಡಿದ್ದಾನೆ ಅನಿಸುತ್ತದೆ ಅಲ್ವಾ? ಆದರೆ, ಆ ವ್ಯಕ್ತಿ ಅಪಾರ್ಟ್ಮೆಂಟ್‌ನಲ್ಲಿರುವ ಶೂ,ಚಪ್ಪಲಿಗಳನ್ನೆಲ್ಲ ಚೀಲಗಳಲ್ಲಿ ತುಂಬಿಸುತ್ತಾನೆ. ಎರಡು ಬೃಹತ್ ಚೀಲಗಳಲ್ಲಿ ಚಪ್ಪಲಿ ತುಂಬಿ ಅಲ್ಲಿಂದ ಹೊರಟು ಹೋಗುತ್ತಾನೆ.
ಆ ಅಪಾರ್ಟ್‌ಮೆಂಟ್‌ನಲ್ಲಿ ಇಂತಹ ಕಳ್ಳತನ ನಡೆದಿರುವುದು ಇದು ಮೂರನೇ ಬಾರಿ. ಈ ಬಗ್ಗೆ ಸಿಸಿಟಿವಿಯಲ್ಲಿ ನೋಡಿದವರಿಗೆ ವ್ಯಕ್ತಿಯೊಬ್ಬರು ಚಪ್ಪಲಿಯನ್ನು ಸಾಗಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಆ ಚಪ್ಪಲಿಯನ್ನು ಕದ್ದು ಏನು ಮಾಡುತ್ತಾರೆ ಎಂದು ನಿವಾಸಿಗಳು ಆಶ್ಚರ್ಯ ಪಡುತ್ತಿದ್ದಾರೆ. ವಿಡಿಯೋ ನೋಡಿ ಎಲ್ಲೋ ಚಪ್ಪಲಿ ಅಂಗಡಿ ಇಡೋಕೆ ಕದ್ದಿರಬೇಕು ಎಂದು ನೆಟ್ಟಿಗರು ತಮಾಷೆಯ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.