ಹೊಸದಿಗಂತ ವರದಿ, ಚಾಮರಾಜನಗರ:
ಕೆ.ಗುಡಿ ಸಫಾರಿಗೆ ತೆರಳಿದ್ದ ವೇಳೆ ಹಿಂದಿನಿಂದ ಒಂದು ಹಾಗೂ ಮುಂದಿನಿಂದ ಮತ್ತೋಂದು ಆನೆ ಪ್ರವಾಸಿಗರ ಜೀಪ್ ಅಡ್ಡಗಟ್ಟಿರುವ ಘಟನೆ ನಡೆದಿದೆ.
ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಕೆ. ಗುಡಿ ಸಫಾರಿಯ ಭತ್ತದಗದ್ದೆ ಕೆರೆ ಎಂಬ ರಸ್ತೆಯಲ್ಲಿ ಸಫಾರಿ ಜೀಪ್ ಕಂಡ ಆನೆಯೊಂದು ದಾಳಿ ಮಾಡಲು ಅಟ್ಟಾಡಿಸಿಕೊಂಡು ಬಂದಿದೆ. ಇದೇ ವೇಳೆ, ಮುಂದಿನಿಂದಲೂ ಬಂದ ಮತ್ತೊಂದು ಸಲಗ ಅಡ್ಡಹಾಕಿ ಪ್ರವಾಸಿಗರನ್ನು ಬೆಚ್ಚಿ ಬೀಳಿಸಿದೆ. ಜೀಪ್ ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.
ಈ ಕುರಿತು, ಕೆ.ಗುಡಿ ಆರ್ಎಫ್ಒ ಶಾಂತಪ್ಪ ಪೂಜಾರ್ ಪ್ರತಿಕ್ರಿಯಿಸಿ, ಘಟನೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಆದರೆ, ಭತ್ತದಗದ್ದೆ ಕೆರೆ ರಸ್ತೆಯಲ್ಲಿ 9 ಆನೆಗಳ ಗುಂಪಿದೆ ಎಂದರು. ಸಾಮಾನ್ಯವಾಗಿ ಒಂದು ಆನೆ ಅಟ್ಟಾಡಿಸಿಕೊಂಡು ಬರುವುದು ಸಹಜ. ಆದರೆ, ಎರಡೆರಡು ಸಲಗಗಳು ಸಫಾರಿ ವಾಹನ ಅಡ್ಡಗಟ್ಟಿದ ಘಟನೆಗಳು ತೀರಾ ಅಪರೂಪ ಎಂದಿದ್ದಾರೆ.
ಸಫಾರಿ ಚಾಲಕ ನಾಗರಾಜು ಮಾತನಾಡಿ, ಜೀಪ್್ನಲ್ಲಿ ಪ್ರವಾಸಿಗರನ್ನು ಸಪಾರಿಯಲ್ಲಿ ಕರೆದೊಯ್ಯತ್ತಿದ್ದಾಗ ಈ ಘಟನೆ ನಡೆದಿದೆ. ಸಫಾರಿ ವಾಹನ ಕಂಡ ತಕ್ಷಣ ಅನೆ ಅಟ್ಟಾಡಿಸಿಕೊಂಡು ಬಂದಿತ್ತು. ವಾಹನದ ವೇಗವನ್ನು ಹೆಚ್ಚಿಸಿದೆ. ಅದರೂ ಸಹ ಅನೆ ನಮ್ಮ ವಾಹನವನ್ನು ಬಳಷ್ಟು ದೂರದವೆರೆಗೆ ಹಿಂಬಾಲಿಸಿತ್ತು.
ಇನ್ನೂ ಬಚಾವ್ ಆದವೆ ಎನ್ನುತ್ತಿದ್ದಂತೆ ಮುಂದಿನಿಂದ ಮತ್ತೊಂದ ಸಲಗ ನಮ್ಮ ವಾಹನದ ಹತ್ತಿರಕ್ಕೆ ಬರುತ್ತಿದ್ದು. ಈ ಆನೆಯನ್ನು ಸಹ ತಪ್ಪಿಸಿಕೊಂಡು ಪ್ರವಾಸಿಗರನ್ನು ಸುರಕ್ಷೀತವಾಗಿ ಕಾಡಿನಿಂದ ಹೊರಕ್ಕೆ ತಂದಿದ್ದೇನೆ. ನನ್ನ ಪ್ರಾಣ ಹೋದರು ಸರಿ ಪ್ರವಾಸಿಗರನ್ನು ಆನೆ ದಾಳಿಯಿಂದ ತಪ್ಪಿಸಬೇಕು ಎಂಬ ಉದ್ದೇಶವನ್ನು ವಾಹನ ಚಾಲನೆ ಮಾಡಿದೆ ಎಂದು ಚಾಲಕ ನಾಗರಾಜು ಅನುಭವನ್ನು ಹೇಳಿಕೊಂಡಿದ್ದೇನೆ.