ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಮದುವೆ ದಿನ ವರ ಬಾಯಲ್ಲಿ ಗುಟ್ಕಾ ಹಾಕಿದ್ದಾನೆ ಎಂಬ ಕಾರಣಕ್ಕೆ ಮದುವೆಯಾಗಲು ವಧು ನಿರಾಕರಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಜೂನ್ 5ರಂದು ಮದುವೆಯೊಂದು ನಿಶ್ಚಯವಾಗಿತ್ತು. ಮದುವೆಯ ದಿನ ವರ ಬಾಯಲ್ಲಿ ಗುಟ್ಕಾ ಹಾಕಿಕೊಂಡು ಬಂದಿದ್ದಾನೆ. ವರ ಗುಟ್ಕಾ ಹಾಕುತ್ತಾನೆ ಎಂಬ ಕಾರಣವನ್ನು ಮುಂದೆ ಇಟ್ಟುಕೊಂಡು ವಧು ಮದುವೆಯನ್ನೇ ಮುರಿದುಕೊಂಡಿದ್ದಾಳೆ.
ಮಿಶ್ರೌಲಿ ಜಿಲ್ಲೆಯ ವಧು ತನ್ನ ಪತಿಯಾಗುವವನು ಗುಟ್ಕಾ ಹಾಕುತ್ತಾನೆಂಬ ಕಾರಣಕ್ಕೆ ಮದುವೆ ಮುರಿದುಕೊಂಡಿದ್ದಾಳೆ. ಕುಟುಂಬದವರು ಎಷ್ಟು ಮನವಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಎರಡೂ ಕುಟುಂಬದವರು ಈವರೆಗೂ ವಿನಿಮಯ ಮಾಡಿಕೊಂಡಿದ್ದ ಉಡುಗೊರೆಯನ್ನ ಹಿಂದಿರುಗಿಸಲು ನಿರ್ಧರಿಸಿದ್ದಾರೆ ಎಂದು ಮಣಿಯರ್ ಪೊಲೀಸ್ ಅಧಿಕಾರಿ ಶೈಲೇಂದ್ರ ಸಿಂಗ್ ತಿಳಿಸಿದ್ದಾರೆ.