ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸ ದಿಗಂತ ವರದಿ, ಮೈಸೂರು:
ರಾಜ್ಯದಲ್ಲಿ ವೇಗವಾಗಿ ಹರಡುತ್ತಿರುವ ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಕೂಡಲೇ ಲಾಕ್ ಡೌನ್ ಜಾರಿಗೆ ತರುವ ಅವಶ್ಯಕತೆ ಇದೆ.ಇದರಿಂದ ಅನಾನುಕೂಲವಾಗುವ ವರ್ಗಗಳಿಗೆ ಸರ್ಕಾರ ತಕ್ಷಣವೇ ಸಹಾಯ ಧನ ನೀಡ ಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಒತ್ತಾಯಿಸಿದರು.
ಶುಕ್ರವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ತಲೆದೋರಿರುವ ಕೊರೋನಾ ಸೋಂಕಿನ ಪರಿಸ್ಥಿತಿ ಬಗ್ಗೆ ಹೈಕೋರ್ಟ್ ಕೇಂದ್ರಕ್ಕೆ ಹೇಳಬೇಕಾದ ಪರಿಸ್ಥಿತಿಯನ್ನು, ನಮ್ಮ ಕರ್ನಾಟಕ ರಾಜ್ಯ ಸಂಸದರು ಮತ್ತು ಕೇಂದ್ರದ ಮಂತ್ರಿಗಳು ತಂದಿದ್ದಾರೆ. ಇವರು ಏನು ಮಾಡುತ್ತಿದ್ದಾರೆ. ಪ್ರಧಾನಿ ಬಳಿ ತಮ್ಮ ರಾಜ್ಯಕ್ಕೆ ಬೇಕಾದ ಸವಲತ್ತುಗಳನ್ನು ಕೇಳಿ ತರಲು ಸಾಧ್ಯವಾಗುತ್ತಿಲ್ಲ ಎಂಬು ಸಾಬೀತಾಗಿದೆ. ಚಾಮರಾಜ ನಗರದಲ್ಲಿ ಆಕ್ಸಿಜನ್ ಕೊರತೆಯಿಂದ 28 ಮಂದಿ ಸಾವಾಗಿದ್ದರೂ ಬಿಜೆಪಿ ಸರ್ಕಾರ ಮುಚ್ಚಿ ಹಾಕಲು ಪ್ರಯತ್ನಿಸಿದೆ ಎಂದು ಆರೋಪಿಸಿದರು.
ದೇಶದಲ್ಲಿ ಕೊರೋನಾದಿಂದ ಸಾವುಗಳು ಸಂಭವಿಸಿದರೂ ದೇಶದ ಪ್ರಧಾನಿಗಳು ಸತ್ತ ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ. ಪಶ್ಚಿಮ ಬಂಗಾಳದ ಚುನಾವಣೆ ಮುಗಿದು ಮೂರು ನಾಲ್ಕು ದಿನಗಳು ಕಳದಿಲ್ಲ, ಅಲ್ಲಿ ಗಲಾಟೆ ಬಗ್ಗೆ ಮಾತಮಾಡುತ್ತಿದ್ದಾರೆ. ಇವರಿಗೆ ಜನರ ಬಗ್ಗೆ ಕಾಳಜಿ ಇಲ್ಲ ಎಂದು ಕಿಡಿಕಾರಿದರು.
ಮಾಜಿ ಶಾಸಕ ವಾಸು ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ವರ್ಗದ ಕೊರತೆ ಇದೆ. ಅವರಿಗೆ ಸರಿಯಾದ ರಕ್ಷಣೆ ಇಲ್ಲ. ಕೋವಿಡ್ ನಿಯಂತ್ರಿಸಲು ಸರಿಯಾದ ಸಲಕರಣೆಗಳು ಇಲ್ಲ. ನಗರದ ಒಂದೇ ಆಸ್ಪತ್ರೆಯಲ್ಲಿ 10 ವೆಂಟಿಲೇಟರ್ ಇರುವುದನ್ನು ತೋರಿಸಲಿ. ಸರ್ಕಾರ ಕೊರೋನಾ ವಾರಿಯರ್ಸ್ ಎಂದು ಘೋಷಣೆ ಮಾಡಿರುವ ಪ್ರತಕರ್ತರು,ಪೊಲೀಸರು ಮತ್ತು ವೈದ್ಯರಿಗೆ ಇನ್ಶೂರೆನ್ಸ್ ನೀಡುತ್ತಿಲ್ಲ. ಆದ್ದರಿಂದ ಪ್ರಾಮುಖ್ಯತೆ ಇರುವವರು ಕೆಲಸ ಮಾಡಲು ಮುಂದಾಗುತ್ತಿಲ್ಲ. ಇದು ಹೀಗೆ ಮುಂದುವರೆದರೆ ರಾಜ್ಯದಲ್ಲಿ ಕಠಿಣ ಪರಿಸ್ಥಿ ಬರಲಿದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ನರ್ಸಿಂಗ್ ಅಂತಿಮ ತರಬೇತಿ ಪಡೆದವರು ಸುಮಾರು 85 ಸಾವಿರ ಮಂದಿ ಇದ್ದಾರೆ, ಇವರಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆ ನೀಡಿದರೆ, ಕೆಲಸ ಮಾಡಲು ಮುಂದಾಗುತ್ತಾರೆ. ಸರ್ಕಾರದ ಸೌಲಭ್ಯ ಮತ್ತ ಸವಲತ್ತುಗಳನ್ನು ನೀಡಿ. ಅಧಿಕಾರಿಗಳ ಮೇಲೆ ಡಿಕ್ಟೇಟ್ ಮಾಡಬೇಡಿ, ಇದು ಮಾನವೀಯತೆಯ ಸಮಯ. ಇದನ್ನು ಬಳಸಿಕೊಳ್ಳಿ, ಬರೀ ಬೆಡ್ ಕೊಟ್ಟರೆ ಸಾಲದು. ವೈದ್ಯರು ಮತ್ತು ಸಿಬ್ಬಂದಿಗಳು ಬೇಕಾಗುತ್ತದೆ, ಇದರ ಕಡೆ ಗಮನ ಹರಿಸಿ ಎಂದು ಸಲಹೆ ನೀಡಿದರು.
ಅಧಿಕಾರಿಗಳು 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ.ಅವರ ಮೇಲೆ ದಬ್ಬಾಳಿ ಮಾಡಬೇಡಿ.ಇಂದು ಡಿಹೆಚ್ ಓ ಕೆಲಸಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿಗೆ ಬಂದಿದ್ದಾರೆ. ಪಿಪಿಇ ಕಿಟ್ ಗಳ ಕೊರತೆ ಇದೆ. ಇದನ್ನು ಬರೀ ನಾಲ್ಕು ಗಂಟೆಗೊಮ್ಮೆ ಬದಲಿಸಬೇಕು. ಮಾಸ್ಕ್ ಮತ್ತು ಇತರೆ ಸಾಮಗ್ರಿಗಳ ಬೆಲೆ ಹೆಚ್ಚಿಸಿ ಸರಕಾರ ಹೆಚ್ಚು ಹಣ ಮಾಡುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನ ಮೈಸೂರು ನಗರ ಅಧ್ಯಕ್ಷ ಆರ್.ಮೂರ್ತಿ ಉಪಸ್ಥಿತರಿದ್ದರು.