Sunday, June 26, 2022

Latest Posts

ಸಿ.ಟಿ.ಸ್ಕ್ಯಾನ್ ಕೇಂದ್ರಗಳಿಗೆ ರಾಜ್ಯ ಅಧಿಕಾರಿಗಳ ದಿಢೀರ್ ಭೇಟಿ, ಪರಿಶೀಲನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಕೋಲಾರ:

ಕೋವಿಡ್ ಪರೀಕ್ಷೆಗೆ ಸಂಬಂಧಿಸಿದಂತೆ ಖಾಸಗಿ ಸಿ.ಟಿ.ಸ್ಕ್ಯಾನ್ ಕೇಂದ್ರಗಳು ಸರ್ಕಾರ ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಕುರಿತ ದೂರುಗಳ ಹಿನ್ನಲೆಯಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.
ರಾಜ್ಯ ಕ್ಷಕಿರಣ ವಿಕಿರಣ ಸುರಕ್ಷತಾ ಇಲಾಖೆ ಉಪನಿರ್ದೇಶಕ ಡಾ.ಕೆ.ಎಸ್.ರಾಜೇಶ್, ಸೇವಾ ಅಭಿಯಂತರ ಶಿವಕುಮರ್, ಹಿರಿಯ ರೇಡಿಯಾಲಜಿಕಲ್ ಟೆಕ್ನಾಲಾಜಿಸ್ಟ್ ಎಂ.ಆರ್.ರಾಮಚಂದ್ರಾರೆಡ್ಡಿ, ಪ್ರಭಾರ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಕಮಲ ಅವರುಗಳಿದ್ದ ತಂಡ ನಗರದ ಸಿ.ಟಿ.ಸ್ಕ್ಯಾನ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕೋವಿಡ್ ಪತ್ತೆಹಚ್ಚಲು ಹೆಚ್‌ಆರ್‌ಸಿಟಿ ಸ್ಕ್ಯಾನ್ ಪರೀಕ್ಷೆಗೆ ಸರ್ಕಾರ ಎಲ್ಲಾ ಶುಲ್ಕಗಳೂ ಸೇರಿ ಬಿಪಿಎಲ್ ಕಾರ್ಡುದಾರರಿಗೆ ೧೫೦೦ ರೂ ಮತ್ತು ಇತರೆ ವರ್ಗದ ಜನತೆಗೆ ೨೫೦೦ ರೂಗಳನ್ನು  ಹಾಗೂ ಚೆಸ್ಟ್ ಎಕ್ಸರೇಗೆ ೨೫೦ ರೂಗಳನ್ನು ಮಾತ್ರ ಪಡೆಯಲು ಆದೇಶಿಸಿತ್ತು.
ಆದರೂ ಕೇಂದ್ರಗಳು ಜನರಿಂದ ಹೆಚ್ಚಿನ ಹಣ ವಸೂಲಿ ಮಾಡಿವೆ ಎಂಬ ದೂರಿನ ಹಿನ್ನಲೆಯಲ್ಲಿ ಅಧಿಕಾರಿಗಳು ಈ ದಾಳಿ ನಡೆಸಿದ್ದು, ಸರ್ಕಾರ ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡಿರುವುದು ಕಂಡು ಬಂದರೆ ಅಂತಹ ಆಸ್ಪತ್ರೆ,ಕೇಂದ್ರಗಳ ಮೇಲೆ ರಾಷ್ಟ್ರೀಯ ವಿಪತ್ತು ನಿಯಂತ್ರಣ ಕಾಯಿದೆ ಮತ್ತು ಕೆಪಿಎಂಇ ಕಾಯಿದೆ-೨೦೦೭ ಮತ್ತು ೨೦೧೭ರ ಅನ್ವಯ ಮತ್ತು ರಾಷ್ಟ್ರೀಯ ವಿಪತ್ತು ನಿಯಂತ್ರಣ ಕಾಯಿದೆ-೨೦೦೫ರಡಿ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಆರೋಗ್ಯ ಇಲಾಖೆ ಆಯುಕ್ತರು  ಮತ್ತು ಕೋಲಾರ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುವುದಾಗಿ ತಂಡದಲ್ಲಿದ್ದ ಡಾ.ಕಮಲ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss