spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆಕ್ಸಿಜನ್ ಕೊರತೆ ನಿವಾರಣೆಗಾಗಿ ಖುದ್ದು ಫೀಲ್ಡಿಗಿಳಿದ ಹೊನ್ನಾಳಿ ಶಾಸಕರು!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….

ಹೊಸ ದಿಗಂತ ವರದಿ, ದಾವಣಗೆರೆ:

ಆಕ್ಸಿಜನ್ ಕೊರತೆ ವಿಷಯ ತಿಳಿಯುತ್ತಿದ್ದಂತೆ ಖುದ್ದು ಫೀಲ್ಡಿಗಿಳಿದ ಹೊನ್ನಾಳಿ ಶಾಸಕರು 40ಕ್ಕೂ ಅಧಿಕ ಜನರ ಜೀವ ಉಳಿಸುವ ಮೂಲಕ ಸಮಯಪ್ರಜ್ಞೆ  ಮೆರೆದಿದ್ದಾರೆ.
ಮಂಗಳವಾರ 45 ಸೋಂಕಿತರಿಗೆ ಕೇವಲ ಒಂದೂವರೆ ಗಂಟೆ ಮಾತ್ರ ಆಕ್ಸಿಜನ್ ಬಾಕಿ ಇದ್ದ ವಿಚಾರ ಗೊತ್ತಾಗುತ್ತಿದ್ದಂತೆಯೇ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಿನಿಮೀಯ ರೀತಿಯಲ್ಲಿ ಹರಿಹರಕ್ಕೆ ಬಂದು, ಅಗತ್ಯ
ಸಿಲಿಂಡರ್‌ಗಳನ್ನು ತಮ್ಮ ತಾಲೂಕಿಗೆ ಪೊಲೀಸ್ ಎಸ್ಕಾರ್ಟ್‌ನಲ್ಲಿ ಕೊಂಡೊಯ್ಯುವ ಮೂಲಕ ಜನರ ಅಮೂಲ್ಯ ಪ್ರಾಣ ರಕ್ಷಣೆಗೆ ಕಾರಣರಾಗಿದ್ದಾರೆ.
ಜಿಲ್ಲೆಯ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಬೆಳಗ್ಗೆ ಭೇಟಿ ನೀಡಿದ್ದ ಶಾಸಕ ರೇಣುಕಾಚಾರ್ಯ ಸೋಂಕಿತರಿಗೆ ಧೈರ್ಯ ತುಂಬಿ, ತಿಂಡಿ ವ್ಯವಸ್ಥೆ ಮಾಡಿ ಮನೆಗೆ ಮರಳಿದ್ದರು. ಆನಂತರ ಅಧಿಕಾರಿಗಳ ಸಭೆ ನಡೆಸುವಷ್ಟರಲ್ಲೇ ಆಸ್ಪತ್ರೆ ವೈದ್ಯಾಧಿಕಾರಿ ಕರೆ ಮಾಡಿ, ಆಸ್ಪತ್ರೆಯಲ್ಲಿ ಕೇವಲ ಒಂದೂವರೆ ಗಂಟೆಗಾಗುವಷ್ಟು ಮಾತ್ರ ಆಕ್ಸಿಜನ್ ಇದ್ದು, 45 ಜನರು ಆಕ್ಸಿಜನ್ ಬೆಡ್‌ನಲ್ಲಿದ್ದಾರೆ ಎಂಬ ವಿಷಯ ತಿಳಿಸಿದರು.
ತಕ್ಷಣವೇ ಕಾರ್ಯಪ್ರವೃತ್ತರಾದ ರೇಣುಕಾಚಾರ್ಯ ಸಭೆಯನ್ನು ಮಧ್ಯದಲ್ಲೇ ಮೊಟಕುಗೊಳಿಸಿ, ತಮ್ಮ ಎಸ್ಕಾರ್ಟ್‌ನೊಂದಿಗೆ ಹರಿಹರ ತಾಲೂಕಿನತ್ತ ಪ್ರಯಾಣ ಬೆಳೆಸಿದರು. ಹರಿಹರದ ಸದರನ್ ಗ್ಯಾಸ್ ಬಳಿ ಕೆಲ ಹೊತ್ತಿನಲ್ಲೇ ತಲುಪಿದ ಶಾಸಕ ರೇಣುಕಾಚಾರ್ಯ ಜಗಳೂರಿಗೆ
ಒಯ್ಯುತ್ತಿದ್ದ ಆಕ್ಸಿಜನ್ ಸಿಲಿಂಡರ್‌ಗಳನ್ನು ತುರ್ತಾಗಿರುವ ಕಾರಣ ಹೊನ್ನಾಳಿಗೆ ಕಳಿಸಿ ಕೊಡುವಂತೆ ಸದರನ್ ಗ್ಯಾಸ್ನ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಆಕ್ಸಿಜನ್ ಸಿಲಿಂಡರ್‌ಗಳನ್ನು ಅಪೆ ವಾಹನಕ್ಕೆ ತುಂಬಿಸಿ, ತಮ್ಮ ಬೆಂಗಾವಲು ಪಡೆಯ ವಾಹನವನ್ನು ಗ್ಯಾಸ್ ಸಿಲಿಂಡರ್ ವಾಹನಕ್ಕೆ ಎಸ್ಕಾರ್ಟ್ ಆಗಿ, ಹೊನ್ನಾಳಿ ಆಸ್ಪತ್ರೆಗೆ ಕಳಿಸಿಕೊಟ್ಟರು. ಹರಿಹರದಿಂದ ಹೊರಟ ಆಕ್ಸಿಜನ್ ಸಿಲಿಂಡರ್
ವಾಹನ ಹೊನ್ನಾಳಿ ತಲುಪುವವರೆಗೂ ರೇಣುಕಾಚಾರ್ಯ ಪ್ರತಿ ಹಂತದಲ್ಲೂ ನಿಗಾ ವಹಿಸುವ ಮೂಲಕ ಗಮನ ಸೆಳೆದರು.
ಕಳೆದ 3 ದಿನಗಳಿಂದಲೂ ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಒಂದು ವೇಳೆ ಆಕ್ಸಿಜನ್ ಸಿಲಿಂಡರ್ ಸಿಗುವುದು ತಡವಾಗಿದ್ದರೆ ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲೂ ಚಾಮರಾಜ ನಗರ ದುರಂತದ ಘಟನೆ ಮರುಕಳಿಸುವ ಸಾಧ್ಯತೆ
ಇತ್ತು. ಮೊನ್ನೆಯಿಂದಲೇ ಆಕ್ಸಿಜನ್ ವಿಚಾರದಲ್ಲಿ ಜಾಗೃತರಾಗಿರುವ ಶಾಸಕ ರೇಣುಕಾಚಾರ್ಯ ಜನರ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss