ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, June 24, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಐಪಿಎಲ್​ ರದ್ದುಗೊಂಡರು ಆಟಗಾರರಿಗೆ ಸಿಗಲಿದೆ ಸಂಪೂರ್ಣ ವೇತನ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಕಾರಣದಿಂದ 14ನೇ ಆವೃತ್ತಿಯ ಐಪಿಎಲ್​ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಇದರಿಂದ ಬಿಸಿಸಿಐ, ಪ್ರಸಾರ ಹಕ್ಕು ಪಡೆದಿರುವ ಸ್ಟಾರ್​ ಸ್ಫೋರ್ಟ್ಸ್ ಮತ್ತು 8 ಐಪಿಎಲ್ ಫ್ರಾಂಚೈಸಿಗಳು ಭಾರಿ ನಷ್ಟ ಅನುಭವಿಸಲಿವೆ.
ಬಿಸಿಸಿಐ ಸರಿಸುಮಾರು 2000 ಕೋಟಿಗಿಂತಲೂ ಹೆಚ್ಚು ನಷ್ಟ ಅನುಭವಿಸಲಿದೆ. ಆದರೆ, ಐಪಿಎಲ್​ನಲ್ಲಿ ಭಾಗವಹಿಸುವ ಆಟಗಾರರು ಮಾತ್ರ ಸಂಪೂರ್ಣ ವೇತನ ಪಡೆಯಲಿದ್ದಾರೆ.
ಆಟಗಾರರ ಒಪ್ಪಂದದ ನಿಯಮಗಳ ಪ್ರಕಾರ ಫ್ರಾಂಚೈಸಿಗಳು ಆಟಗಾರರಿಗೆ ಮೂರು ಕಂತುಗಳಲ್ಲಿ ವೇತನವನ್ನು ನೀಡಲಿದ್ದು, ಈಗಾಗಲೇ ಮೊದಲ ಕಂತನ್ನು ನೀಡಿವೆ. ಉಳಿದ 2 ಕಂತುಗಳು ಟೂರ್ನಿ ಮುಗಿಯುವ ವೇಳೆಗೆ ನೀಡಬೇಕಿರುತ್ತದೆ. ಒಂದು ವೇಳೆ ಬಿಸಿಸಿಐ ಟೂರ್ನಿಯನ್ನು ಮುಂದುವರಿಸಲು ಸಾಧ್ಯವಾಗದಿದ್ದರೂ ಆಟಗಾರರಿಗೆ ಸಂಪೂರ್ಣ ವೇತನವನ್ನು ಪಡೆಯುತ್ತಾರೆ.
ಆಟಗಾರರ ವೇತನವನ್ನು ಫ್ರಾಂಚೈಸಿ ವಿಮಾ ಪಾಲಿಸಿಗಳ ಅಡಿ ಮೊದಲೇ ವಿಮೆ ಮಾಡಲಾಗಿರುತ್ತದೆ. ಟೂರ್ನಿಯ ವೇಳೆ ಆಟಗಾರರು ಗಾಯಕ್ಕೊಳಗಾದರೆ, ಇನ್ಯಾವುದೇ ಅವಘಡದ ಸಂದರ್ಭದಲ್ಲಿ ಇನ್ಸೂರೆನ್ಸ್​ ಮೂಲಕ ಹಣ ಪಡೆಯಲಿದ್ದಾರೆ.
ವರದಿಯ ಪ್ರಕಾರ 2021ರ ಐಪಿಎಲ್​ ಆಟಗಾರರ ಒಟ್ಟು ವೇತನ 483 ಕೋಟಿ ರೂಪಾಯಿಗಳಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss