ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………
ಹೊಸ ದಿಗಂತ ವರದಿ, ಕಲಬುರಗಿ:
ಕೋವಿಡ್ 19 2ನೇ ಅಲೆಯ ಸಂಕಷ್ಟದಿಂದಾಗಿ ಸೇವಾ ಬಾರತಿ ತರಗತಿಗಳನ್ನು ನಡೆಸುವ ಶಿಕ್ಷಕಿಯರಿಗೆ ಸೇವಾ ಭಾರತಿ ಕಲಬುರಗಿ ವತಿಯಿಂದ ಆಥಿ೯ಕವಾಗಿ 2500 ರೂ,ಸಹಾಯ ಧನ ಹಾಗೂ ರೆಶನ್ ಕಿಟಗಳನ್ನು ವಿತರಿಸಲಾಯಿತು.
ಸೇವಾ ಭಾರತಿ ಜಿಲ್ಲಾ ಅಧ್ಯಕ್ಷ ರಮೇಶ್ ತಿಪನೂರ ಮಾತನಾಡಿ, ಕೋವಿಡ ಸಂಕಷ್ಟ ದ ಸಮಯದಲ್ಲಿ ಸೇವಾ ಭಾರತಿ ಯೂ ಮಕ್ಕಳಿಗೆ ಪಾಠ ಹೇಳುವ ತರಗತಿಗಳು ಎಲ್ಲವೂ ಸಂಪೂರ್ಣ ನಿಂತಿದ್ದು, ಹೀಗಾಗಿ ಶಿಕ್ಷಕಿಯರಿಗೆ ಸಹಾಯ ವಾಗುವ ನಿಟ್ಟಿನಲ್ಲಿ ಈ ಸೇವೆ ಮಾಡಲಾಗುತ್ತಿದೆ ಎಂದರು.
ಚಂದ್ರಕಾಂತ ಕಲಕೋರಿ,ಭೀಮಾಶಂಕರ, ಅಜು೯ನ ಜೀ ಸೇರಿದಂತೆ ಸೇವಾ ಭಾರತಿ ಪ್ರಮುಖರು ಉಪಸ್ಥಿತರಿದ್ದರು