ಹೊಸ ದಿಗಂತ ವರದಿ, ಬೀದರ್:
ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯನವರು ದಲಿತರಿಗೆ ಅಪಮಾನ ಮಾಡಿರುವುದು ನೋಡಿದರೆ, ಅಹಿಂದ ಹೆಸರಿನಲ್ಲಿ ಚುನಾವಣೆಗಳಲ್ಲಿ ದಲಿತರ ವೋಟಬ್ಯಾಂಕ್ ಬಳಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯನವರು ಈಗ ಏರಿದ ಏಣಿಯನ್ನೇ ಒದೆಯುತ್ತಿರುವುದು ಖಂಡನೀಯ ಎಂದು ಬಿಜೆಪಿ ಕಲಬುರಗಿ ವಿಭಾಗದ ಸಹ ಪ್ರಮುಖರಾದ ಈಶ್ವರಸಿಂಗ ಠಾಕೂರ ಅವರು ಹೇಳಿದರು.
ಅವರು ಇಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಭಾರತೀಯ ಜನತಾ ಪಾರ್ಟಿ ಎಸ್.ಸಿ. ಮೋರ್ಚಾ ಬೀದರ ಜಿಲ್ಲಾ ಘಟಕದಿಂದ ದಲಿತರಿಗೆ ಅಪಮಾನಿಸಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತ, ದಲಿತರನ್ನು ಮುಖ್ಯಮಂತ್ರಿ ಹುದ್ದೆಯನ್ನು ತಪ್ಪಿಸುವಲ್ಲಿ ಸಿದ್ದರಾಮಯ್ಯವನರ ಪಾತ್ರ ಮಹತ್ತರವಾಗಿದೆ ಎಂಬುವುದು ಇಡೀ ನಾಡಿಗೆ ಗೊತ್ತಿದೆ ಎಂದರು.
ಎಸ್.ಸಿ. ಮೋರ್ಚಾದ ಜಯಕುಮಾರ ಕಾಂಗೆ, ನಿಗಮದ ಅಧ್ಯಕ್ಷರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡುತ್ತ, ದಲಿತರ ಬಗ್ಗೆ ಅಪಮಾನಜನಕ ಹೇಳಿಕೆ ನೀಡಿರುವ ಸಿದ್ಧರಾಮಯ್ಯನವರು ಮನಸ್ಥಿತಿ ಎಂಬುವುದು ಇಡೀ ದಲಿತ ಸಮುದಾಯಕ್ಕೆ ಗೊತ್ತಾಗಿದೆ ಎಂದರು.
ಈ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶ್ರೀಮತಿ ಲುಂಬಣಿ ಗೌತಮ ಮತ್ತು ಬಿಜೆಪಿ ಎಸ್.ಸಿ. ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.