ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮನೆ ಗೋಡೆ ಕುಸಿದು ಮೃತಪಟ್ಟ ಮಹಿಳೆಯ ಕುಟುಂಬಸ್ಥರಿಗೆ 5 ಲಕ್ಷ ರೂ ಪರಿಹಾರ ಧನ ಮಂಜೂರು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………….

ಹೊಸ ದಿಗಂತ ವರದಿ, ಬೀದರ್:

ಆಕಸ್ಮಿಕ ಸುರಿದ ಬಾರಿ ಮಳೆಯಿಂದ ಮನೆ ಗೋಡೆ ಕುಸಿದು ಮೃತ ಪಟ್ಟ ಮಹಿಳೆಯ ಕುಟುಂಬದವರಿಗೆ ಪ್ರಕೃತಿ ವಿಕೋಪ ಪರಿಹಾರದಡಿ 4 ಲಕ್ಷ ರೂ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1 ಲಕ್ಷ‌ ರೂ ಸೇರಿ ಒಟ್ಟು 5 ಲಕ್ಷ ರೂ ಪರಿಹಾರ ಧನ ಮಂಜೂರಿ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಹುಮನಾಬಾದ್ ತಾಲೂಕಿನ ಕುಮಾರ ಚಿಂಚೋಳಿ ಗ್ರಾಮದ ಪಾರ್ವತಿ ಗಂಡ ವೈಜಿನಾಥ (31) ಮೃತಪಟ್ಟ ಮಹಿಳೆ. ಮೃತ ಪಾರ್ವತಿ ಅವರು ಮೂಲತಃ ಬೀದರ ತಾಲೂಕಿನ ಜನವಾಡ ಗ್ರಾಮದವರಾಗಿದ್ದಾರೆ.
ಮೇ 20ರಂದು ಸುರಿದ ಜಿಟಿಜಿಟಿ ಮಳೆಗೆ ರಾತ್ರಿ ಸುಮಾರು 10.30 ಗಂಟೆಗೆ ಮನೆಗೋಡೆ ಕುಸಿದು ಪಾರ್ವತಿ ಅವರ ಮೇಲೆ ಬಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಪಾರ್ವತಿ ಅವರ ಗಂಡ ವೈಜಿನಾಥ್ ಮತ್ತು ಮಕ್ಕಳಾದ ಅಕ್ಷರಾ (7) ಮತ್ತು ಅಕ್ಷತಾ (4) ಗಂಭೀರಗಾಯಗೊಂಡಿದ್ದಾರೆ.
ಗಾಯಾಳುಗಳು ಆಸ್ಪತ್ರೆಗೆ: ಗಂಭೀರ ಗಾಯಗೊಂಡ ಮೃತ ಪಾರ್ವತಿ ಅವರ ಗಂಡ ವೈಜಿನಾಥ ಮತ್ತು ಅವರ ಇಬ್ಬರು ಮಕ್ಕಳು ಬ್ರೀಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲವೇ ಗಂಟೆಗಳಲ್ಲಿ ಪರಿಹಾರ ಮಂಜೂರು: ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸರ್ಕಾರದ ಆದೇಶದ ಮೇರೆಗೆ ನೊಂದ ಸಂತ್ರಸ್ಥರಿಗೆ ಬೀದರ ಜಿಲ್ಲಾಡಳಿತದಿಂದ ಪರಿಹಾರ ಧನ ಮಂಜೂರಿ ಆದೇಶ ಹೊರಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss