Sunday, July 3, 2022

Latest Posts

ಆಸ್ತಿಗಾಗಿ ಮಗನಿಂದಲೇ ವೃದ್ಧ ತಂದೆಯ ಕೊಲೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………

ಹೊಸ ದಿಗಂತ ವರದಿ, ಹಾಸನ:

ಮನೆಯನ್ನು ತನ್ನ ಹೆಸರಿಗೆ ಬರೆದುಕೊಡಲಿಲ್ಲ ಎಂಬ ಕಾರಣಕ್ಕೆ ಪಾಪಿ ಪುತ್ರನೇ ವೃದ್ಧ ತಂದೆಯನ್ನು ಕೊಲೆಗೈದಿರುವ ಘಟನೆ ಅರಸೀಕೆರೆ ತಾಲೂಕಿನ ಬಾಣವಾರ ಹೋಬಳಿಯ ವೆಂಕಟಾಪುರ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಗ್ರಾಮದ ಸಣ್ಣಚಿಕ್ಕಣ್ಣ(70) ಮಗನಿಂದಲೇ ಹತ್ಯೆಯಾದ ನತದೃಷ್ಟ ತಂದೆ.

ಘಟನೆ ವಿವರ
ಮೃತ ಸಣ್ಣಚಿಕ್ಕಣ್ಣ ಮತ್ತು ಮಗ ಶ್ರೀನಿವಾಸ(35), ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದರು. ಆರೋಪಿ ಶ್ರೀನಿವಾಸ ನಿತ್ಯ ಕುಡಿದು ಬಂದು ಮನೆಯನ್ನು ನನ್ನ ಹೆಸರಿಗೆ ಬರೆದುಕೊಡು ಎಂದು ತಂದೆಯೊಂದಿಗೆ ಜಗಳ ಕಾಯುತ್ತಿದ್ದ. ಇದೇ ವಿಷಯಕ್ಕೆ ಎಷ್ಟೋ ದಿನ ಹಲ್ಲೆ ಸಹ ಮಾಡಿದ್ದ.
ಮೇ 1 ರಾತ್ರಿ ಸಹ ಇದೇ ವಿಚಾರಕ್ಕೆ ಕುಡಿದು ಬಂದು ಜಗಳ ತೆಗೆದಿದ್ದಾನೆ.
ನಂತರ ಇಬ್ಬರು ಒಂದೇ ಮನೆಯಲ್ಲಿ ಮಲಗಿದ್ದಾರೆ. ಈ ವೇಳೆ ಮಧ್ಯರಾತ್ರಿ ಸುಮಾರಿಗೆ ಸಣ್ಣ ಚಿಕ್ಕಣ್ಣನನ್ನು, ಶ್ರೀನಿವಾಸ ಬಿದಿರಿನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಬಾಣಾವರ ಪೊಲೀಸರು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss