Monday, August 8, 2022

Latest Posts

ಚಿನ್ನದ ಸರ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳಿಗೆ 2 ವರ್ಷ ಕಠಿಣ ಜೈಲು, ದಂಡ

ಹೊಸ ದಿಗಂತ ವರದಿ , ಚಿಕ್ಕಮಗಳೂರು:

ಚಿನ್ನದ ಸರ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳಿಗೆ ಕಡೂರು ತಾಲ್ಲೂಕಿನ 3ನೇ ಹೆಚ್ಚುವರಿ ಸಿ.ಜೆ ಮತ್ತು ಜೆಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ತರೀಕೆರೆ ತಾಲ್ಲೂಕು ಅಮೃತಾಪುರ ಹೋಬಳಿ ನಾಗೇನಹಳ್ಳಿ ಗ್ರಾಮದ ಮುರುಗೇಶ ಹಾಗೂ ಅಶೋಕಭೋವಿ ಶಿಕ್ಷೆಗೆ ಗುರಿಯಾದ ಆರೋಪಿಗಳು.
2019 ಜನವರಿ 26 ರಂದು ಬೀರೂರು ಪಟ್ಟಣದ ತ್ರೀನೇತ್ರ ಕಲ್ಯಾಣ ಮಂಟಪದ ಮುಂಭಾಗದ ಆವರಣದಲ್ಲಿ ಗುರುರಾಜ್ ಎಂಬುವವರ ಅವರ ಪತ್ನಿ ಮಂಜುಳ ತನ್ನ ಮಗುವಿಗೆ ಊಟ ಮಾಡಿಸುತ್ತಿರುವಾಗ ಆರೋಪಿ ಮುರುಗೇಶ ಮಂಜುಳ ಅವರ ಕೊರಳಿನಲ್ಲಿದ್ದ 42.330 ಗ್ರಾಂ ತೂಕದ ಸುಮಾರು 1,30,000 ರೂ. ಬೆಲೆ ಬಾಳುವ ಬಂಗಾರದ ಸರವನ್ನು ಸುಲಿಗೆ ಮಾಡಿಕೊಂಡು ಅಶೋಕಾಭೋವಿ ಜೊತೆ ಪರಾರಿಯಾಗಿದ್ದ.
ಪ್ರಕರಣದ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಎಂ.ಟಿ.ದೀಪು ಅವರು ಆರೋಪಿಗಳಾದ ಮುರುಗೇಶ ಮತ್ತು ಅಶೋಕಭೋವಿಗೆ 2 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 3 ಸಾವಿರ ರೂ. ದಂಡ ವಿಧಿಸಿದ್ದಾರೆ.
ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಹೆಚ್.ಆರ್.ಶ್ರೀಧರ ವಾದ ಮಂಡಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss