Friday, July 1, 2022

Latest Posts

ಶ್ರಮಿಕ ವರ್ಗಕ್ಕೆ ಸಿಗಲಿದೆ ಮತ್ತೊಂದು ಪ್ಯಾಕೇಜ್: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ವರದಿ, ಶಿವಮೊಗ್ಗ:

ಕೊರೋನಾ ಲಾಕ್‌ಡೌನ್‌ನಿಂದಾಗಿ ಶ್ರಮಿಕ ವರ್ಗಕ್ಕೆ 2 ಪ್ಯಾಕೇಜ್ ನೀಡಲಾಗಿದ್ದು, ಅಗತ್ಯವಿದ್ದಲ್ಲಿ ಪುನಃ ನೀಡಲಾಗುವುದು.
ಶೀಘ್ರದಲ್ಲಿಯೇ ರಾಜ್ಯಕ್ಕೆ ಲಸಿಕೆ ಪೂರೈಕೆಯಾಗಲಿದ್ದು 18 ಮೀರಿದ ಪ್ರತಿಯೊಬ್ಬರಿಗೂ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಶುಕ್ರವಾರ ಸ್ವಕ್ಷೇತ್ರ ಶಿಕಾರಿಪುರಕ್ಕೆ ಆಗಮಿಸಿದ ಅವರು ತಾಪಂ ಸಭಾಂಗಣದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕೊರೋನಾ ಸೋಂಕಿನಿಂದಾಗಿ ತೆರಿಗೆ ಸಂಗ್ರಹ ಡಿತವಾಗಿ ಸರ್ಕಾರದ ಆದಾಯ ತೀವ್ರಕುಸಿದಿದೆ. ನೀರಾವರಿ ಸಹಿತ ಅಭಿವೃದ್ಧಿ ಕಾರ್ಯಕ್ಕೆ ಧಕ್ಕೆಯಾಗದ ರೀತಿ ಶಕ್ತಿಮೀರಿ ಶ್ರಮಿಸುತ್ತಿರುವುದಾಗಿ ತಿಳಿಸಿದ ಅವರು, ಹಣಕಾಸಿನ ನೆರವಿಗೆ ಪ್ರಧಾನಿಗೆ ಮನವಿ ಸಲ್ಲಿಸಲಾಗಿದ್ದು ನಿರೀಕ್ಷೆಯಲ್ಲಿದ್ದೇವೆ. ಅರುಣ್‌ಸಿಂಗ್ ರಾಜ್ಯ ಭೇಟಿ ಬಗ್ಗೆ ಹೆಚ್ಚಿನ ಮಹತ್ವ ಬೇಡ, ಸಹಜವಾಗಿ ಸಮಾಲೋಚಿಸಲು ಧಾವಿಸುತ್ತಿದ್ದಾರೆ ಎಂದು ಪರ್ತಕರ್ತರ ಪ್ರಶ್ನೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದ ರಾಘವೇಂದ್ರ, ನಗರಾಭಿವೃದ್ಧಿ  ಸಚಿವ ಬೈರತಿ ಬಸವರಾಜ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss