Friday, July 1, 2022

Latest Posts

ಪ್ರೊಟೋಕಾಲ್ ಪ್ರಕಾರ ಸೋಂಕಿತರಿಗೆ ರೆಮ್ಡಿಸಿವಿರ್ ಔಷಧ: ಸಚಿವೆ ಜೊಲ್ಲೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………..

ಹೊಸ ದಿಗಂತ ವರದಿ, ವಿಜಯಪುರ:

ಪ್ರೊಟೋಕಾಲ್ ಪ್ರಕಾರ ಸೋಂಕಿತರಿಗೆ ರೆಮ್ಡಿಸಿವಿರ್ ಔಷಧ ನೀಡಲಾಗುತ್ತಿದೆ. ಆದರೆ, ಪ್ರತಿಯೊಬ್ಬರು ರೆಮ್ಡಿಸಿವಿರ್ ಔಷಧ ಮೇಲೆ ಅವಲಂಬನೆಯಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದಲ್ಲಿ ಗುರುವಾರ ಮಾತನಾಡಿ, ಯಾವ ಆಸ್ಪತ್ರೆಯ ಸೋಂಕಿತರಿಗೆ ರೆಮ್ಡಿಸಿವಿರ್ ಔಷಧ ಬೇಕೋ, ಬೇಡ್ವೋ ಅನ್ನೊದನ್ನು ಆ್ಯಪ್ ಮೂಲಕ ಮಾಹಿತಿ ಪಡೆದುಕೊಂಡು ವ್ಯವಸ್ಥೆ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದರು.
ಖಾಸಗಿ ಆಸ್ಪತ್ರೆಗೆ ಎಷ್ಟು ರೆಮ್ಡಿಸಿವಿರ್ ಬೇಕು ಎನ್ನುವುದನ್ನು ಮಾಹಿತಿ ಪಡೆದುಕೊಂಡು ಔಷಧ ನೀಡಲಾಗುತ್ತಿದೆ ಎಂದು ಹೇಳಿದರು.
ಅಲ್ಲದೇ, ರೆಗ್ಯೂಲರ್ ಔಷಧ ಜಿಲ್ಲೆಯಲ್ಲಿ ಲಭ್ಯವಿದೆ‌. ಆದರೆ, ಕೊರತೆಗಳಿದರೆ ಅವುಗಳನ್ನು ಡಿಎಚ್ಒ ಅವರೊಂದಿಗೆ ಸಮಾಲೋಚನೆ ನಡೆಸಿ ಎಲ್ಲವನ್ನೂ ಬಗೆಹರಿಸಲಾಗುವುದು ಎಂದರು.
ಇನ್ನು ಔಷಧೀಯಗಳ ಕೊರತೆಯ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಇನ್ಮೇಲೆ ಕೊರೋನಾ ಸೋಂಕಿತರಿಗೆ ಔಷಧಗಳು ಕಡಿಮೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಡಿಎಚ್ಒ ಅವರಿಂದ ರಿಪೋರ್ಟ್ ತರಿಸಿಕೊಂಡು ಎಲ್ಲೆಲ್ಲಿ ಕುಂದುಕೊರತೆಗಳಿದ್ದರೆ ಅಲ್ಲಲ್ಲಿ ಔಷಧ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss