ಭಾರತದಲ್ಲಿ ದಾಖಲೆಯ ವಿದೇಶೀ ಬಂಡವಾಳ ಹೂಡಿಕೆ: ಕರ್ನಾಟಕದ್ದೇ ಮುಂಚೂಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಭಾರತದಲ್ಲಿ 2021-22 ರಲ್ಲಿ ಅತಿ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯಾಗಿದ್ದು ಅದರಲ್ಲೂ ಕರ್ನಾಟಕವು ಅತಿಹೆಚ್ಚು ಹೂಡಿಕೆಯಾದ ರಾಜ್ಯವಾಗಿದೆ. ಕಳೆದ ಇಪ್ಪತ್ತು ವರ್ಷಗಳಿಗೆ ಹೋಲಿಸಿದರೆ ವಿದೇಶಿ ಬಂಡವಾಳ ಹೂಡಿಕೆಯ ಒಳಹರಿವು 76% ದಷ್ಟು ಹೆಚ್ಚಾಗಿದೆ.

ಕೊರೊನಾ ಕಾರಣದಿಂದಾಗಿ ಜಗತ್ತಿನ ಆರ್ಥಿಕ ಪರಿಸ್ಥಿತಿಯು ಡೋಲಾಯಮಾನವಾಗಿತ್ತು.ಅದರಲ್ಲೂ ಭಾರತದ ಆರ್ಥಿಕತೆಯು ಚಿಂತಾಜನಕವಾಗಿದೆ ಎಂದೆಲ್ಲ ಹಲವರು ಊಹಾಪೋಹದ ವರದಿಗಳನ್ನು ಪ್ರಕಟಿಸಿದ್ದರು. ಕರ್ನಾಟಕದಲ್ಲೂ ಕೂಡ ವಿಪಕ್ಷಗಳು ಹಿಜಾಬ್‌, ಜಟ್ಕಾ ಮುಂತಾದ ಸಂಗತಿಗಳಿಂದ ವಿದೇಶೀ ಬಂಡವಾಳಗಳು ಬರುವುದಿಲ್ಲವೆಂದು ಹೀಗಳೆದಿದ್ದವು. ಆದರೆ ಪ್ರಸ್ತುತ ಹೂಡಿಕೆಯ ಟ್ರೆಂಡ್‌ ಈ ಎಲ್ಲ ಆರೋಪಗಳನ್ನೂ ಸುಳ್ಳಾಗಿಸಿದೆ. ಪ್ರಸ್ತುತ ಕೋವಿಡ್‌ ಸಂಕಷ್ಟದ ನಂತರ ವಿದೇಶಿ ಬಂಡವಾಳ ಹೂಡಿಕೆಯಲ್ಲಿ 23‍% ದಷ್ಟು ಏರಿಕೆಯಾಗಿದೆ. ಹೂಡಿಕೆಯಲ್ಲಿ ಎಷ್ಟೆಷ್ಟು ಹೆಚ್ಚಳವಾಗಿದೆ ಎಂಬುದನ್ನು ಈ ಕೆಳಗಿನ ಚಿತ್ರ ವಿವರಿಸುತ್ತದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!