ಎರಡು ವರ್ಷಗಳಲ್ಲೇ ಕನಿಷ್ಟ ಮಟ್ಟ ತಲುಪಿದೆ ವಿದೇಶಿ ವಿನಿಮಯ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ವಿದೇಶಿ ವಿನಿಮಯ ಸಂಗ್ರಹವು ಸತತ ಏಳನೇ ವಾರವೂ ಕುಸಿದಿದ್ದು ಸೆಪ್ಟೆಂಬರ್ 16ಕ್ಕೆ ಕೊನೆಗೊಂಡ ವಾರದಲ್ಲಿ 545.652 ಶತಕೋಟಿ ಡಾಲರ್‌ಗೆ ತಲುಪಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಅಂಕಿಅಂಶಗಳು ತೋರಿಸಿವೆ.

ಸೆಪ್ಟೆಂಬರ್ 9ಕ್ಕೆ ಕೊನೆಗೊಂಡ ಹಿಂದಿನ ವಾರದಲ್ಲಿ ವಿದೇಶಿ ವಿನಿಮಯ ಸಂಗ್ರಹವು 550.871 ಶತಕೋಟಿ ಡಾಲರ್‌ಗಳಷ್ಟಿತ್ತು. ಅಕ್ಟೋಬರ್ 2, 2020 ರಿಂದ ಇಲ್ಲಿಯವರೆಗೆ ವಿದೇಶಿ ವಿನಿಮಯ ಸಂಗ್ರಹವು ಕನಿಷ್ಟ ಮಟ್ಟಕ್ಕೆ ಕುಸಿದಿದ್ದು 5.22 ಶತಕೋಟಿ ಡಾಲರ್‌ ನಷ್ಟು ಕಡಿಮೆಯಾಗಿದೆ ಎಂದು ಆರ್‌ಬಿಐನ ಸಾಪ್ತಾಹಿಕ ಅಂಕಿಅಂಶಗಳು ಶುಕ್ರವಾರ ತೋರಿಸಿದೆ.

ಸೆಪ್ಟೆಂಬರ್ 16ಕ್ಕೆ ಕೊನೆಗೊಂಡ ವಾರದಲ್ಲಿ ವಿದೇಶಿ ಕರೆನ್ಸಿ ಆಸ್ತಿಯು 484.901 ಶತಕೋಟಿ ಡಾಲರ್, ಚಿನ್ನದ ಸಂಗ್ರಹ 38.186 ಶತಕೋಟಿ ಡಾಲರ್ ಮತ್ತು ವಿಶೇಷ ಮೀಸಲು ಸಂಗ್ರಹ 17.686 ಶತಕೋಟಿ ಡಾಲರ್‌ ಗಳಷ್ಟಿದೆ. ಹಿಂದಿನ ವಾರದ ಅಂತ್ಯಕ್ಕೆ ವಿದೇಶಿ ವಿನಿಮಯ ಮೀಸಲು 550.871 ಶತಕೋಟಿ ಡಾಲರ್‌ ನಷ್ಟಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!