ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಸುರಕ್ಷತೆ, ಭಾರತೀಯರ ಸುರಕ್ಷತೆ, ದೇಶದ ನೀತಿ, ನಿಯಮ, ವಿದೇಶಾಂಗ ಪಾಲಿಸಿಗಳಲ್ಲಿ ರಾಜಿಯಾಗದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಗೆ ಮೇಲಿಂದ ಮೇಲೆ ಬೆದರಿಕೆಗಳು ಬರುತ್ತಿದೆ. ಇದರ ಪರಿಣಾಮ ಕೇಂದ್ರ ಸರ್ಕಾರ ಜೈಶಂಕರ್ ಭದ್ರತೆ ಹೆಚ್ಚಿಸಿದೆ. ಝೆಡ್ ಸೆಕ್ಯೂರಿಟಿಗೆ ಭದ್ರತೆ ಹೆಚ್ಚಿಸಲಾಗಿದೆ.
ಇಂಟಲಿಜೆನ್ಸ್ ವಿಭಾಗ ನೀಡಿದ ವರದಿ ಆಧರಿಸಿ ಕೇಂದ್ರ ಸರ್ಕಾರ ಜೈಶಂಕರ್ ಭದ್ರತೆ ಹೆಚ್ಚಿಸಿದೆ. ಭಾರತದ ವಿದೇಶಾಂಗ ನೀತಿ ಹಾಗೂ ಇತರ ದೇಶಗಳ ಜೊತೆಗಿನ ದ್ವಿಪಕ್ಷೀಯ ಸಂಬಂಧ ವೃದ್ಧಿಯಲ್ಲಿ ಜೈಶಂಕರ್ ಪಾತ್ರ ಮಹತ್ವದ್ದಾಗಿದೆ.
ಝೆಡ್ ಕೆಟಗರಿ ಭದ್ರತೆಯಲ್ಲಿ 22 ಭದ್ರತಾ ಕಮಾಂಡೋಗಳು, 4 ರಿಂದ 6 ಎನ್‌ಎಸ್‌ಜಿ ಕಮಾಂಡೋ ಹಾಗೂ ಪೊಲೀಸರು ಜೈಶಂಕರ್‌ಗೆ ಭದ್ರತೆ ನೀಡಲಾಗುತ್ತದೆ. ಇದುವರೆಗೆ ಜೈಶಂಕರ್‌ಗೆ ವೈ ಕೆಟಗರಿ ಭದ್ರತೆ ನೀಡಲಾಗಿತ್ತು. ಈ ಕೆಟಗರಿಯಲ್ಲಿ 8 ಪೊಲೀಸರು ಹಾಗೂ 1 ರಿಂದ 2 ಎನ್‌ಎಸ್‌ಜಿ ಕಮಾಂಡೋ ಪಡೆಗಳು ಸಚಿವರಿಗೆ ಭದ್ರತೆ ಒದಗಿಸುತಿತ್ತು.
ಕೆನಡಾ ವಿಚಾರದಲ್ಲಿ ಭಾರತದ ನಿಲುವ, ರಷ್ಯಾದಿಂದ ತೈಲ ಖರೀದಿ ಒಪ್ಪಂದ, ಭಯೋತ್ಪಾದಕರ ವಿರುದ್ದದ ಪ್ರಕರ ಮಾತುಗಳು ಸೇರಿದಂತೆ ಹಲವು ವಿಚಾರದಲ್ಲಿ ಜೈಶಂಕರ್ ವಿಶ್ವಾದ್ಯಂತ ಪ್ರಸಿದ್ಧಿಯಾಗಿದ್ದಾರೆ. ಇದೇ ವೇಳೆ ಜೈಶಂಕರ್ ವಿರುದ್ದ ಬೆದರಿಕೆಗಳು ಹೆಚ್ಚಾಗಿದೆ.