spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗೋವಾ ಪ್ರವಾಸೋದ್ಯಮ: 5 ಲಕ್ಷ ವಿದೇಶಿ ಪ್ರವಾಸಿಗರಿಗೆ ಉಚಿತ ವೀಸಾ

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತದ ದಾಖಲೆಯ ವ್ಯಾಕ್ಸಿನೇಷನ್ ಬಳಿಕ ಇದೀಗ ಗೋವಾ ಪ್ರವಾಸೋದ್ಯಮ ತೆರೆಯಲು ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ವ್ಯಾಕ್ಸಿನೇಷನ್ ದರವು ಹೆಚ್ಚಾಗುತ್ತಿದ್ದಂತೆ ಗೋವಾದಂತಹ ಪ್ರವಾಸೋದ್ಯಮ ಅವಲಂಭಿತ ರಾಜ್ಯಗಳಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಗೋವಾದಲ್ಲಿ ಶೇ.100ರಷ್ಟು ಜನರಿಗೆ ವ್ಯಾಕ್ಷಿನೇಷನ್ ನ ಮೊದಲ ಡೋಸ್ ನೀಡಿದ್ದು, ಹೆಮ್ಮೆಯ ವಿಚಾರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಲಸಿಕೀಕರಣ ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಜನರ ಜೀವನ ಶೈಲಿಗೂ ಮುಖ್ಯವಾಗಲಿದೆ. ಗೋವಾದಲ್ಲಿ ಈಗ ಪ್ರವಾಸೋದ್ಯಮ ನಿಯಮಗಳನ್ನು ಸಡಿಲಗೊಳಿಸುವ ಸಮಯ ಬಂದಿದೆ ಎಂದರು.
ಹಿಂದಿನಂತೆಯೇ ಈಗಲೂ ಪ್ರವಾಸೋದ್ಯಮವನ್ನು ಮತ್ತೆ ತೆರೆಯಲು ಪ್ರಯತ್ನಿಸುತ್ತಿದ್ದೇವೆ. ಈ ವೇಳೆ ವಿದೇಶಿ ಪ್ರವಾಸಿಗರಿಗೆ ಗೋವಾ ಪ್ರವಾಸಕ್ಕೆ ಶೀಘ್ರವೇ ಅನುಮತಿ ನೀಡಲಿದ್ದು, 5 ಲಕ್ಷ ವಿದೇಶಿ ಪ್ರವಾಸಿಗರಿಗೆ ಉಚಿತ ವೀಸಾ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss