ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪಿಡಿಎಫ್ ಪಾಸ್ ವರ್ಡ್ ಮರೆತು ಹೋಗಿದ್ಯಾ? ಪಾಸ್ ವರ್ಡ್ ತೆಗೆಯಲು ಈ ಸಿಂಪಲ್ ವಿಧಾನ ಟ್ರೈ ಮಾಡಿ..

ತುಂಬಾ ಜನ ಭದ್ರತೆಯ ದೃಷ್ಟಿಯಿಂದ ಪಿಡಿಎಫ್ ಫೈಲ್‌ಗಳಿಗೆ ಪಾಸ್‌ವರ್ಡ್‌ ಹಾಕಿರುತ್ತಾರೆ. ಆದರೆ ಎಷ್ಟೋ ಸಂದರ್ಭದಲ್ಲಿ ಪಿಡಿಎಫ್‌ ಫೈಲ್‌ಗಳ ಪಾಸ್‌ವರ್ಡ್‌ ಮರೆತು ಹೋಗುತ್ತದೆ. ಇನ್ಮುಂದೆ ಪಾಸ್ ವರ್ಡ್ ಮರೆತು ಹೋಗಿದ್ದರೆ ಚಿಂತೆ ಮಾಡಬೇಡಿ. ಹೇಗೆ ತೆಗೆಯುವುದು ಇಲ್ಲಿದೆ ನೋಡಿ.

ಮೊದಲ ವಿಧಾನ:
ಅಡೋಬ್ ಅಕ್ರೋಬ್ಯಾಟ್ ಪ್ರೊ ಬಳಸಿ ಪಾಸ್‌ವರ್ಡ್ಇ ರುವ ಪಿಡಿಎಫ್ ಫೈಲ್ ತೆರೆಯಬಹುದು. ವಿಂಡೋದ ಎಡಭಾಗದಲ್ಲಿರುವ ಲಾಕ್ ಐಕಾನ್ ಕ್ಲಿಕ್ ಮಾಡಿ ಮತ್ತು ಅನುಮತಿ ವಿವರಗಳು ಕ್ಲಿಕ್ ಮಾಡಿ. ನಂತರ  ಸೆಕ್ಯುರಿಟಿ ಮೆಥಡ್ ವಿಧಾನ ಬಾಕ್ಸ್‌ ಕ್ಲಿಕ್ ಮಾಡಿ ಮತ್ತು ಡ್ರಾಪ್-ಡೌನ್ ಮೆನುವಿನಲ್ಲಿ, ‘ನೋ ಸೆಕ್ಯುರಿಟಿ’ ಆಯ್ಕೆಮಾಡಿ. ನಂತರ ‘ಸರಿ’ ಎಂಬ ಮಾರ್ಕ್ ಕ್ಲಿಕ್ ಮಾಡಿದರೆ ನಿಮ್ಮ ಪಾಸ್‌ವರ್ಡ್ ತೆಗೆದುಹಾಕಲಾಗುತ್ತದೆ. ನಂತರ ಫೈಲ್ ಸೇವ್ ಮಾಡಿ.

ಎರಡನೇ ವಿಧಾನ:

ಪಾಸ್‌ವರ್ಡ್‌ ಇರುವ ಪಿಡಿಎಫ್ ಫೈಲ್ ಅನ್ನು ಗೂಗಲ್ ಕ್ರೋಮ್ ಅಥವಾ ಇನ್ನಾವುದೇ ಬ್ರೌಸರ್ನಲ್ಲಿ ತೆರೆಯಿರಿ. ಫೈಲ್ ತೆರೆಯಲು ಅಗತ್ಯವಿರುವ ಪಾಸ್‌ವರ್ಡ್ ಅನ್ನು ಒದಗಿಸಿ. ನಂತರ, ಮುದ್ರಣ ಡೈಲಾಗ್ ಬಾಕ್ಸ್‌  ತೆರೆಯಲು ನೀವು ಮೇಲಿನ ಬಲಭಾಗದಲ್ಲಿರುವ ‘ಪ್ರಿಂಟ್’ ಬಟನ್ ಒತ್ತಿರಿ. ಆನಂತರ  ಪ್ರೀ ವ್ಯೂವ್ ವಿಂಡೋದಲ್ಲಿದ್ದರೆ, ‘ಬದಲಾವಣೆ’ ಬಟನ್ ಕ್ಲಿಕ್ ಮಾಡಿ. ‘ಪಿಡಿಎಫ್ ಆಗಿ ಉಳಿಸಿ’ ಆಯ್ಕೆಮಾಡಿ. ನಂತರ ‘ಉಳಿಸು’ ಬಟನ್ ಕ್ಲಿಕ್ ಮಾಡುವ ಮೂಲಕ ಮುಂದುವರಿಯಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss