Wednesday, August 10, 2022

Latest Posts

ಸರಳ-ಸಾಂಪ್ರದಾಯಿಕ ಮೈಸೂರು ದಸರಾ ಆಚರಣೆಗಾಗಿ 6 ಉಪ ಸಮಿತಿಗಳ ರಚನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ವರದಿ,ಮೈಸೂರು:
ಕೊರೋನಾ 3ನೇ ಅಲೆಯ ಭೀತಿ ನಡುವೆ ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕವಾಗಿ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಆಚರಣೆ ಮಾಡಲು ತೀರ್ಮಾನಿಸಲಾಗಿದ್ದು, ಈ ಹಿನ್ನಲೆಯಲ್ಲಿ ಸಿದ್ಧತೆಗಾಗಿ 5 ಉಪ ಸಮಿತಿಗಳನ್ನು ರಚಿಸಲಾಗಿದೆ.
ಸ್ವಾಗತ ಮತ್ತು ಆಮಂತ್ರಣ ಸಮಿತಿ:
ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ- ಉಪ ವಿಶೇಷಾಧಿಕಾರಿ, ಮೈಸೂರು ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತೆ ಎಂ.ಜೆ.ರೂಪಾ- ಕಾರ್ಯಾಧ್ಯಕ್ಷೆ, ಪಾಲಿಕೆಯ ವಲಯ ಆಯುಕ್ತ ಎಂ.ನoಜುoಡಯ್ಯ ಕಾರ್ಯದರ್ಶಿಯಾಗಿದ್ದಾರೆ.
ದೀಪಾಲಂಕಾರ ಸಮಿತಿ:
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ- ಉಪ ವಿಶೇಷಾಧಿಕಾರಿ, ಅಧೀಕ್ಷಕ ಇಂಜಿನಿಯರ್ ನಾಗೇಶ್- ಕಾರ್ಯಾಧ್ಯಕ್ಷ, ಕಾರ್ಯಪಾಲಕ ಇಂಜಿನಿಯರ್ ಬಿ.ಕೆ.ಯೋಗೇಶ್- ಕಾರ್ಯದರ್ಶಿಯಾಗಿದ್ದಾರೆ.
ಮೆರವಣಿಗೆ ಸಮಿತಿ:
ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ- ಉಪ ವಿಶೇಷಾಧಿಕಾರಿ, ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್ ಆಯುಕ್ತ ಪ್ರದೀಪ್ ಗುಂಟಿ- ಕಾರ್ಯಾಧ್ಯಕ್ಷ, ದೇವರಾಜ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಂ.ಎನ್.ಶಶಿಧರ್-ಕಾರ್ಯದರ್ಶಿಯಾಗಿದ್ದಾರೆ.
ಸಾಂಸ್ಕೃತಿಕ ದಸರಾ:
ಜಿಪಂ ಸಿಇಒ ಯೋಗೀಶ್- ಉಪ ವಿಶೇಷಾಧಿಕಾರಿ, ರಂಗಾಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ- ಕಾರ್ಯಾಧ್ಯಕ್ಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಚನ್ನಪ್ಪ- ಕಾರ್ಯದರ್ಶಿಯಾಗಿದ್ದಾರೆ.
ಸ್ವಚ್ಛತೆ ಮತ್ತು ವ್ಯವಸ್ಥೆ:
ನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ- ಉಪ ವಿಶೇಷಾಧಿಕಾರಿ, ಪಾಲಿಕೆ ಆರೋಗ್ಯಾಧಿಕಾರಿ ಡಿ.ಜಿ.ನಾಗರಾಜ್- ಕಾರ್ಯಾಧ್ಯಕ್ಷ, ಆರೋಗ್ಯಾಧಿಕಾರಿ ಕೆ.ಹೇಮಂತ್ ರಾಜು- ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಸ್ತಬ್ಧಚಿತ್ರ ಉಪಸಮಿತಿ: ಇದಕ್ಕೆ ಉಪವಿಶೇಷಾಧಿಕಾರಿಯಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್, ಕಾರ್ಯಾಧ್ಯಕ್ಷರಾಗಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು, ಕಾರ್ಯದರ್ಶಿಯಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕಿ ಮೇಘಳರನ್ನು ನೇಮಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss