spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರ ಸುರಕ್ಷತೆಗಾಗಿ ಮುಂಬೈ ಪೊಲೀಸರಿಂದ ‘ನಿರ್ಭಯಾ ದಳ’ ರಚನೆ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಮುಂಬೈನಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಎಚ್ಚೆತ್ತುಕೊಂಡ ಮುಂಬೈ ಪೊಲೀಸರು ಮಹಿಳೆಯರ ರಕ್ಷಣೆಗಾಗಿ ನಿರ್ಭಯಾ ದಳ ರಚಿಸಿದ್ದಾರೆ.

ಏನಿದು ನಿರ್ಭಯಾ ದಳ?
ಪೊಲೀಸರು ಮಾಡಿಕೊಂಡಿರುವ ತಂಡಕ್ಕೆ ನಿರ್ಭಯಾ ದಳ ಎಂದು ಹೆಸರಿಡಲಾಗಿದೆ. ಈ ತಂಡದಲ್ಲಿ ಪಿಎಸ್‌ಐ ಅಥವಾ ಎಎಸ್‌ಐ ರ‍್ಯಾಂಕ್‌ನ ಮಹಿಳಾ ಪೊಲೀಸ್ ಅಧಿಕಾರಿ, ಒಬ್ಬ ಪುರುಷ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿ, ಒಬ್ಬ ಡ್ರೈವರ್ ಇರಲಿದ್ದಾರೆ.

ನಿರ್ಭಯಾ ಪ್ರಕರಣವನ್ನು ಹೋಲುವಂತ ಭೀಕರ ಅತ್ಯಾಚಾರ ಕೊಲೆ ಪ್ರಕರಣ ನಡೆದ ನಂತರ ಸರ್ಕಾರದ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. ಮುಂಬೈ ಮಹಿಳೆಯರಿಗೆ ಸುರಕ್ಷಿತ ನಗರಗಳಲ್ಲಿ ಒಂದಾಗಿದೆ. ಈ ನಗರದಲ್ಲೇ ಅತ್ಯಾಚಾರ ನಡೆದಿರುವುದು ಕ್ರೂರ ಘಟನೆಯಾಗಿದ್ದು, ಮಹಿಳೆಯರ ಸಹಾಯಕ್ಕೆ ಪೊಲೀಸ್ ನಿರ್ಭಯಾ ದಳವನ್ನು ರಚಿಸಿದೆ.

ನಿರ್ಭಯಾ ದಳ ತಂಡ ಪ್ರತಿ ಪೊಲಿಸ್ ಠಾಣೆಯಲ್ಲೂ ಇರಲಿದೆ. ಈ ತಂಡಕ್ಕೆ ಮೊಬೈಲ್-5 ವಾಹನವನ್ನು ನೀಡಲಾಗುವುದು. ನಿರ್ಭಯಾ ದಳದ ತಂಡದವರಿಗೆ ಎರಡು ದಿನಗಳ ತರಬೇತಿ ನೀಡಲಾಗುವುದು. ಈ ದಳವು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಆಯೋಜಿಸಿ ಮಹಿಳಾ ರಕ್ಷಣೆ ಬಗ್ಗೆ ತಿಳಿಸಿಕೊಡುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss