Tuesday, August 16, 2022

Latest Posts

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಮ್ಯಾಕ್ ಗಿಲ್ ಅಪಹರಣ, ಬಿಡುಗಡೆ: ಏನಾಗಿತ್ತು ಗೊತ್ತಾ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರ ಸ್ಟುವರ್ಟ್ ಮ್ಯಾಕ್ ಗಿಲ್ ರನ್ನು ಕಿಡ್ನಾಪ್ ಮಾಡಲಾಗಿದ್ದು, ಅಪಹರಣಕ್ಕೊಳಗಾದ ಒಂದು ಗಂಟೆಯ ನಂತರ ಬಿಡುಗಡೆಯಾಗಿದ್ದಾರೆ ಎಂದು ಪೊಲೀಸ್ ಸಶಸ್ತ್ರಪಡೆ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ಕೈಗೊಂಡಿದ್ದ ಆಸ್ಟ್ರೇಲಿಯಾ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ವಿವರ ಹೀಗಿದೆ:
ಏ.14ರ ರಾತ್ರಿ 8 ಗಂಟೆ ವೇಳೆಗೆ ಸ್ಟುವರ್ಟ್ ಮ್ಯಾಕ್ ಗಿಲ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಮ್ಯಾಕ್ ಗಿಲ್ ಅವರನ್ನು ಅಪಹರಿಸಿಕೊಂಡು ಹೋಗಿದ್ದರು. ನಗರದ ಬೇರೊಂದು ಸ್ಥಳದಲ್ಲಿ ಇರಿಸಿದ್ದರು. ಈ ವೇಳೆ ಮ್ಯಾಕ್ ಗಿಲ್ ಗೆ ಚೆನ್ನಾಗಿ ಥಳಿಸಿ, ಗನ್ ಹಿಡಿದು ಕೊಲೆ ಬೆದರಿಕೆ ಕೂಡ ಹಾಕಿದ್ದರು. ಆದರೆ ಅಪಹರಿಸಿ 1 ಗಂಟೆಯ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈವರೆಗೂ ಈ ಘಟನೆ ನಡೆದಿರುವ ಕಾರಣ ತಿಳಿದುಬಂದಿಲ್ಲ. ದರೋಡೆ ಹಾಗೂ ಅಪರಾಧ ದಳ ಈ ಪ್ರಕರಣದ ತನಿಖೆ ನಡೆಸುತ್ತಿದೆ.
ಸ್ಟುವರ್ಟ್ ಮ್ಯಾಕ್ ಗಿಲ್ ಅವರು ಮಾಜಿ ಲೆಗ್ ಸ್ಪಿನ್ ಬೌಲರ್ ಆಗಿದ್ದರು. ಇವರು 44 ಟೆಸ್ಟ್ ಪಂದ್ಯಗಳಲ್ಲಿ 208 ವಿಕೆಟ್ ಗಳನ್ನು ಪಡೆದಿರುವ ಹೆಗ್ಗಳಿಕೆಗೆ ಪಾತ್ರರಾದವರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss