ಹೊಸದಿಗಂತ ವರದಿ, ಹಾಸನ :
ಪ್ರಸಿದ್ದ ಹಾಸನಾಂಬ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪತ್ನಿ ಸಮೇತ ಆಗಮಿಸಿ ದರುಶನ ಪಡೆದರು.
ಹಾಸನಾಂಬ ಉತ್ಸವ ಇಂದು ಐದನೇ ದಿನವಾಗಿದ್ದು, ಹಾಸನಾಂಬೆ ದರುಶನಕ್ಕೆ ಪತ್ನಿ ಜೊತೆಗೆ ಆಗಮಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜಿಲ್ಲಾಡಳಿತವು ಮಂಗಳವಾದ್ಯ, ಕಲಾತಂಡಗಳ ನಾದ ಸ್ವರದೊಂದಿಗೆ ಭವ್ಯ ಸ್ವಾಗತ ನೀಡಿತು. ಈ ವೇಳೆ ಕುಮಾರಸ್ವಾಮಿ ಅವರಿಗೆ ಶಾಸಕ ಸ್ವರೂಪ್ ಪ್ರಕಾಶ್ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಸಾಥ್ ನೀಡಿದರು.
ಇಂದು ಹಾಸನಾಂವ ದೇವಿತ ದರುಶನ ಪಡೆಯಲು ಭಕ್ತಸಾಗವರವೇ ಹರಿದುಬಂದಿತ್ತು. ಹಾಗೂ ರಾಜಕೀಯ ಪ್ರಮುಖ ಮುಖಂಡರು ಸಹ ದೇವಿಯದರುಶನ ಪಡೆದರು. ಕಳೆದು ಐದು ದಿನಗಳಿಂದ ಭಕ್ತಾದಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಉತ್ಸಕ್ಕೆ ಮುಂಜಾಗ್ರತೆಯಾಗಿ ಸಕಲ ಸಿದ್ದತೆಗಳನ್ನು ತಯಾರಿಮಾಡಿಕೊಂಡಿದ್ದ ಜಿಲ್ಲಾಡಳಿತ ಸಾರ್ವಜನಿಕರ ದರ್ಶನಕ್ಕೆ ಯಾವುದೇ ಅಡೆತಡೆಯಾಗುತ್ತಿಲ್ಲ. ಇತ್ತ ಪ್ರಮುಖ ರಾಜಕೀಯ ಮುಖಂಡರ ದರ್ಶನಕ್ಕೂ ಹಾಗೂ ಸಾರ್ವಜನಿಕರ ದರ್ಶನಕ್ಕೂ ಯಾವುದೇ ಅಡ್ಡಿಯಾಗದಂತೆ ಕ್ರಮವಹಿಸಿರುವ ಜಿಲ್ಲಾಡಳಿತದ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಥಮ ಬಾರಿಗೆ ಸಿಎಂ ಸಿದ್ದರಾಮಯ್ಯ ಭೇಟಿ
ಪ್ರಥಮ ಬಾರಿಗೆ ಸಿಎಂ ಸಿದ್ದರಾಮಯ್ಯ ಹಾಸನಕ್ಕೆ ಹೆಲಿಕಾಫ್ಟರ್ ಮೂಲಕ ಆಗಮಿಸಿ ಹಾಸನಾಂಬೆಯ ದರುಶನ ಪಡೆದರು. ಸಿಎಂಗೆ ಸಂಪುಟ ಸಹೋದ್ಯೋಗಳು ಸಾಥ್ ನೀಡಿದರು.
ಬಳಿಕ ಮಾತನಾಡಿದ ಸಿಎಂ, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಹಾಸನಾಂಬೆಯ ಜಾತ್ರೆ ನಡೆಯುತ್ತಿದೆ ನೀವು ಬರಬೇಕು ಎಂದಿದ್ದರು. ಹಾಗಾಗಿ ನಾನು ಬಂದು ದೇವಿಯ ಆಶಿರ್ವಾದ ಪಡೆದೆ. ಹಾಸನಾಂಬೆ ಬಹಳ ಇತಿಹಾಸವುಳ್ಳ ದೇವಿ. ಈ ಬಾರಿ ರಾಜಣ್ಣ ನೇತೃತ್ವದಲ್ಲಿ ಜಾತ್ರೆ ಬಹಳ ಅಚ್ಚು ಕಟ್ಟಾಗಿ ನಡೆಯುತ್ತಿದೆ ಎಂದರು.
ಕೇಂದ್ರದಿಂದ ಬರ ಪರಿಹಾರ ಬರುವ ಬಗ್ಗೆ ಮಾತನಾಡಿದ ಸಿಎಂ, ಕೇಂದ್ರ ಬರ ಅಧ್ಯಯನ ತಂಡ ರಾಜ್ಯಕ್ಕೆ ಬಂದು ಹೋಗಿ 20 ದಿನ ಕಳೆಯಿತು. ಅವರು ವರದಿ ಕೊಟ್ಟರೂ ಕೇಂದ್ರ ಸರ್ಕಾರ ಗೈಡ್‌ಲೈನ್ ಪ್ರಕಾರ ಹಣ ಬಿಡುಗಡೆ ಮಾಡಿಲ್ಲ. ನಾವು ಎನ್‌ಡಿಆರ್‌ಎಫ್ ನಿಯಮದಡಿ 17,900 ಕೋಟಿ ರೂಪಾಯಿ ಹಣ ಕೇಳಿದ್ದೇವೆ. ನಮ್ಮ ರಾಜ್ಯದಿಂದ ಲಕ್ಷ ಲಕ್ಷ ತೆರಿಗೆ ಕೇಂದ್ರಕ್ಕೆ ಸಂದಾಯವಾಗ್ತಿದೆ. ಹಾಗಾಗಿ ನಮ್ಮ ಹಣ ನಾವು ಕೇಳಿದ್ದೇವೆ ಎಂದರು.
ನಾವು ಕೇಂದ್ರದೊಂದಿಗೆ ಜಗಳ ಮಾಡ್ತಿಲ್ಲ. ನಮ್ಮ ಸಚಿವರು ಹೋಗಿ ಕೇಂದ್ರ ಸಚಿವರನ್ನು ಭೇಟಿಯಾಗೋಣ ಎಂದರೆ ಅವರ ಸಮಯ ಕೊಡುತ್ತಿಲ್ಲ ಎಂದರು . ಹಾಸನಾಂಬೆ ಎಲ್ಲರಿಗೂ ಒಳ್ಳೇದು ಮಾಡಲಿ ಎಂದು ಹೇಳಿದರು.