Friday, August 19, 2022

Latest Posts

ತಿರುಪತಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಹೈಡ್ರಾಮಾ: ಸ್ಥಳದಲ್ಲೇ ಪ್ರತಿಭಟನೆಗೆ ಕುಳಿತ ಚಂದ್ರಬಾಬು ನಾಯ್ಡು

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ತಿರುಪತಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಂಧ್ರಪ್ರದೇಶದಲ್ಲಿನ ವೈಎಸ್​ಆರ್​ ಕಾಂಗ್ರೆಸ್​ನ ಆಡಳಿತವನ್ನು ವಿರೋಧಿಸಿ ಚಂದ್ರಬಾಬು ನಾಯ್ಡು ಚಿತ್ತೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಧರಣಿ ನಡೆಸಲು ತೀರ್ಮಾನಿಸಿದ್ದರು. ಆದರೆ, ಚುನಾವಣಾ ನೀತಿ ಸಂಹಿತೆ ಮತ್ತು ಕೊರೋನಾ ಹೆಚ್ಚಳದ ಕಾರಣ ನೀಡಿ ಚಿತ್ತೂರ್ ಡಿಸಿಪಿ ಚಿತ್ತೂರಿನಲ್ಲಿ ಧರಣಿ ನಡೆಸಲು ಅನುಮತಿ ನೀಡಿರಲಿಲ್ಲ.
ಈ ಹಿನ್ನೆಲೆ ಇದನ್ನು ಖಂಡಿಸಿದ ನಾಯ್ಡು, ವಿಮಾನ ನಿಲ್ದಾಣದಲ್ಲೇ ಪ್ರತಿಭಟನೆ ನಡೆಸಲು ಕುಳಿತಿದ್ದಾರೆ. ಈ ವೇಳೆ ಅವರ ಮನವೊಲಿಸಲು ಪ್ರಯತ್ನಿಸಿದರು ಕೇಳದ ಅವರನ್ನು ರೇನಿಗುಂಟಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ವ್ಯಕ್ತಪಡಿಸಿದ ಚಂದ್ರಬಾಬು ನಾಯ್ಡು , ಬೇಕಾದರೆ ನನ್ನನ್ನು ಬಂಧಿಸಿ. ಆದರೆ ಚುನಾವಣಾ ಪ್ರಚಾರಕ್ಕೆ ನಿರ್ಬಂಧಿಸಬೇಡಿ. ಇಲ್ಲಿ ಏನು ನಡೆಯುತ್ತಿದೆ? ನಾನು ಯಾರನ್ನಾದರೂ ಕೊಲ್ಲಲು ಹೋಗುತ್ತಿದ್ದೇನಾ? ಎಂದು ಪ್ರಶ್ನೆಮಾಡಿದ್ದಾರೆ.
ಈ ನಡುವೆ ಚಂದ್ರಬಾಬು ನಾಯ್ಡು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಮುಕ್ಕಾಲು ಗಂಟೆ ನಂತರ ನಾಯ್ಡು ಅವರು ಪೊಲೀಸರ ವಿನಂತಿಗೆ ಸ್ಪಂದಿಸಿ ಪ್ರತಿಭಟನೆ ನಿಲ್ಲಿಸಿ ಚಿತ್ತೂರಿಗೆ ತೆರಳದೇ ವಾಪಸಾಗಲು ಒಪ್ಪಿಗೆ ಸೂಚಿಸಿದರು ಎನ್ನಲಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!