spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಿಸಿದ ಮಾಜಿ ಸಿಎಂ ಜಗದೀಶ ಶೆಟ್ಟರ್

- Advertisement -Nitte

ಹೊಸ ದಿಗಂತ ವರದಿ,ಹುಬ್ಬಳ್ಳಿ:

ಜಿಲ್ಲೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ವೀಕ್ಷಿಸಿ ಅದರಲ್ಲಿರುವಂತಹ ದೋಷಗಳನ್ನು ಮತ್ತು ಕಾಮಗಾರಿಗೆ ವೇಗ ಹೆಚ್ಚಿಸುವ ಕೆಲಸ ಮಾಜಿ ಸಿಎಂ ಜಗದೀಶ ಶೆಟ್ಟರ ಮಾಡಿದರು.
ಇಲ್ಲಿಯ ತೋಳನಕೆರೆ, ಉಣಕಲ್ಲ್ ಕೆರೆ, ಸಂತೆ, ಡಾಲರ‍್ಸ್ ಕಾಲನಿ ರಸ್ತೆ, ಜೆ.ಸಿ. ನಗರದ ರಸ್ತೆ ಮತ್ತು ಇಂದಿರಾ ಗಾಜಿನ ಮನೆ ಕಾಮಗಾರಿ ಪರಿಶೀಲಿಸಿ ಅಲ್ಲಿಯ ಸ್ಥಳಿಯ ನಾಯಕರು ಮತ್ತು ಸಾರ್ವಜನಿಕರೊಂದಿಗೆ ಸಮಸ್ಯೆಗಳ ಬಗ್ಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯಡಿಯಲ್ಲಿ ಹಲವು ಕಾಮಗಾರಿಗಳು ಪೂರ್ಣಗೊಂಡಿವೆ. ಒಂದು ತಿಂಗಳ ಅವಽಯಲ್ಲಿ ತೋಳನಕರೆ ಹಾಗೂ ಇಂದಿರಾ ಗಾಜಿನ ಮನೆ ಅಭಿವೃದ್ಧಿಗೆ ಅಂತಿಮ ಸ್ಪರ್ಶ ಲಭಿಸಲಿದೆ. ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿ, ಉದ್ಘಾಟನೆಗೆ ಸಿದ್ದವಾಗಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳು ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.
ಸ್ಮಾರ್ಟ್ ಸಿಟಿ ಅಡಿ ಉಣಕಲ್ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡ ನಂತರ ಒಳ ಚರಂಡಿ ನೀರು ಕೆರೆಗೆ ಸೇರುವುದನ್ನು ತಪ್ಪಿಸಲಾಗಿದೆ. ಇದರಿಂದಾಗಿ ಕೆರೆಯಲ್ಲಿ ಅಂತರಗಂಗೆ ಬೆಳೆಯು ವುದು ತಪ್ಪಿದೆ. ೨೦೦ ಕೆ.ಎಲ್.ಡಿ.ಸಾಮರ್ಥ್ಯದ ಕೊಳಚೆ ನೀರು ಶುದ್ಧೀಕರಣ ಘಟಕವನ್ನು ಸಹ ನಿರ್ಮಿಸಲಾಗುವುದು. ಉಣಕಲ್ ಕೆರೆಯ ಎರಡನೇ ಹಂತದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಆರಂಭವಾಗಿದೆ. ಕೆರೆ ಸುತ್ತಲೂ ಒಟ್ಟು ೪.೫ ಕಿ.ಮೀ.ಗೂ ಹೆಚ್ಚಿನ ವಾಕಿಂಗ್ ಪಾಥ್, ಲಾನ್ ಹಾಗೂ ಸೇತುವೆಗಳನ್ನು ನಿರ್ಮಿಸಲಾಗುವುದು ಎಂದರು.
ಪ್ರವಾಸಿ ತಾಣವಾಗಿ ಉಣಕಲ್ ಕೆರೆ: ಒಂದು ವರ್ಷದೊಳಗಾಗಿ ಉಣಕಲ್ ಕೆರೆ ಅಭಿವೃದ್ಧಿಯಾಗಲಿದೆ. ನಂತರ ಬೋಟಿಂಗ್ ಸೇರಿದಂತೆ ಇತರೆ ಜಲಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಈಗಿರುವ ವಿವೇಕಾನಂದ ಪುತ್ಥಳಿ ಬದಲು ದೊಡ್ಡ ಪುತ್ಥಳಿಯನ್ನು ಕೆರೆಯ ಮಧ್ಯ ನಿರ್ಮಿಸುವ ಯೋಚನೆಯಿದೆ. ಪುತ್ಥಳಿ ಜೊತೆಗೆ ವಿವೇಕಾನಂದ ಜೀವನ ಸಾಧನೆಗಳನ್ನು ಸಾರುವ ವಸ್ತುಸಂಗ್ರಹಾಲಯವನ್ನು ಸಹ ನಿರ್ಮಿಸಲಾಗುವುದು ಎಂದು ತಿಳಿಸಿದರು.
ತೋಳನ ಕೆರೆ: ರಾಮಲಿಂಗೇಶ್ವರ ನಗರದಿಂದ ತೊಳನಕರೆ ಹರಿದು ಬರುತ್ತಿರುವ ಕೊಳಚೆ ನೀರು ನಿಲ್ಲಬೇಕು. ಇಲ್ಲವಾದರೆ ಕೋಟಿ ಕೋಟಿ ವ್ಯಯಿಸಿ ಕೆರೆಯ ಅಭಿವೃದ್ಧಿ ಮಾಡಿದ್ದು ವ್ಯರ್ಥವಾಗುತ್ತದೆ.
ಇದಕ್ಕೆ ಪರಿಹಾರ ಕಂಡುಹಿಡುವಂತೆ ಅಽಕಾರಿಗಳಿಗೆ ಸೂಚಿಸಿದರು.
ಡಾಲರ್ ಕಾಲೋನಿ ಹಾಗೂ ಜೆ.ಸಿ.ನಗರದಲ್ಲಿ ಸ್ಮಾರ್ಟ್ ಸಿಟಿ ನಿರ್ಮಿಸುತ್ತಿರುವ ರಸ್ತೆ : ಸ್ಥಳಿಯರ ಅಭಿಪ್ರಾಯ ಪಡೆದಕೊಂಡು ಕಾಮಗಾರಿ ನೆಡೆಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹಮದ್, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ, ಸತೀಶ್ ನರೇಂದ್ರ, ಮಹೇಶ್ ಬುರಲಿ ಇದ್ದರು.
ಬಾಕ್ಸ್
ಪರ್ತಕರ್ತರ ವಾಹನದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ: ಮಾಜಿಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಪತ್ರಕರ್ತರೊಂದಿಗೆ ವಾರ್ತಾ ಇಲಾಖೆ ವಾಹನದಲ್ಲಿ ಪ್ರಯಾಣ ಮಾಡಿ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ನಡೆಸಿದ್ದು ವಿಶೇಷವಾಗಿತ್ತು. ತೋಳಕರೆ ಹಾಗೂ ಡಾಲರ್ಸ್ ಕಾಲೋನಿ ಕಾಮಗಾರಿಗಳನ್ನು ವೀಕ್ಷಣೆ ಮಧ್ಯದಲ್ಲಿ ಮಾಧ್ಯಮದವರೊಂದಿಗೆ ಸಂವಾದ ನೆಡೆಸಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss