ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೋನಿಜೇಟಿ ರೋಸಯ್ಯ ಇಂದು ಮುಂಜಾನೆ ವಿಧಿವಶರಾಗಿದ್ದಾರೆ.
89 ವರ್ಷದ ರೋಸಯ್ಯ ಅವರು ಬಹು ದಿನಗಳಿಂದ ಅನಾರೋದ್ಯದಿಂದ ಬಳಲುತ್ತಿದ್ದರು.
ಇಂದು ಬೆಳಗ್ಗೆ ರಕ್ತದೊತ್ತಡಕ್ಕೆ ಒಳಗಾಗಿದ್ದು, ಬಂಜಾರಾ ಹಿಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೇ ರೋಸಯ್ಯ ಅವರು ಮೃತಪಟ್ಟಿದ್ದಾರೆ.
ರೋಸಯ್ಯ ಅವರು ಕಾಂಗ್ರೆಸ್ನ ಪ್ರಮುಖ ನಾಯಕರಾಗಿದ್ದರು. ಶಾಸಕರಾಗಿ, ಎಂಎಲ್ಸಿ, ಸಂಸದರಾಗಿಯೂ ಕಾರ್ಯನಿರ್ವಹಿಸಿದ್ದರು. ಅವಿಭಜಿತ ಆಂಧ್ರಪ್ರದೇಶದ ಹಣಕಾಸು ಸಚಿವರೂ ಆಗಿದ್ದು, ಏಳು ಬಾರಿ ಬಜೆಟ್ ಮಂಡನೆ ಮಾಡಿ ದಾಖಲೆ ನಿರ್ಮಿಸಿದ್ದರು. ತಮಿಳುನಾಡು ಮತ್ತು ಕರ್ನಾಟಕದ ರಾಜ್ಯಪಾಲರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
- Advertisement -