Monday, August 15, 2022

Latest Posts

ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ‘ಖಾಲಿ ಡಬ್ಬ ಇದ್ದಂತೆ’: ಕೆ.ಎಸ್. ಈಶ್ವರಪ್ಪ

ಹೊಸದಿಗಂತ ವರದಿ, ವಿಜಯಪುರ:

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ‘ಖಾಲಿ ಡಬ್ಬ ಇದ್ದಂತೆ’ ಎಂದು ಕೆ.ಎಸ್. ಈಶ್ವರಪ್ಪ ಗುಡುಗಿದ್ದಾರೆ.
ಸಿಂದಗಿಯಲ್ಲಿ ಮಾತನಾಡಿ, ನಾವು ದಲಿತರನ್ನು ಉದ್ದಾರ ಮಾಡಿದ್ದೇವೆ, ಅಲ್ಪಸಂಖ್ಯಾತರ ಪರ ಇದ್ದೇವೆ ಎಂದು ಹೇಳಿಕೆಗಳನ್ನು ನೀಡುತ್ತಿರುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಖಾಲಿ ಡಬ್ಬಾ ಇದ್ದಂತೆ. ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ, ಯಾರ ಪರವಾಗಿಯೂ ಇಲ್ಲ. ಸುಮ್ಮನೇ ಹೇಳಿಕೆ ನೀಡುತ್ತಿದ್ದಾರೆ. ಖಾಲಿ ಡಬ್ಬ ಹೆಚ್ಚು ಶಬ್ದ ಮಾಡುತ್ತೆ, ಹಾಗೇ ಕಾಂಗ್ರೆಸ್ ನಾಯಕರು ಖಾಲಿ ಡಬ್ಬದಂತೆ ಶಬ್ದ ಮಾಡುತ್ತಿದ್ದಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.
ನಮ್ಮ ಪ್ರಧಾನಿ ಮೋದಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳಿದರು. ನಾವು ಎಲ್ಲಾ ಜಾತಿ, ಧರ್ಮ, ಸಮುದಾಯಗಳ ಜೊತೆ ಇದ್ದೇವೆ. ಯಾರಿಗೂ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ದೇಶದಲ್ಲಿ, ರಾಜ್ಯದಲ್ಲಿ ಹಿಂದುತ್ವವಾದಿಗಳು ಬಿಜೆಪಿ ಜೊತೆಗಿದ್ದಾರೆ. ಇದನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆ. ಕಾಂಗ್ರೆಸ್ ನಾಯಕರಿಗೆ ಮುಸ್ಲೀಂ ಸಮುದಾಯದ ಬಗ್ಗೆ ನಂಬಿಕೆ ಇಲ್ಲ. ಅವರು ಹೇಳಲಿ ನೋಡೋಣ. ಕಾಂಗ್ರೆಸ್ ಮುಸ್ಲೀಂರ ಜೊತೆಗಿದ್ದೇವೆ ಎಂದು ಅದನ್ನು ಕೂಡ ಅವರು ಹೇಳಲ್ಲ. ಸಿಂದಗಿಯಲ್ಲಿ ಈಗಾಗಲೇ ಕಾಂಗ್ರೆಸ್ ಸೋತಿದೆ. ಕಾಂಗ್ರೆಸ್ ಮುಖಂಡರು ಭಯದಲ್ಲಿ ಮಾತಾಡುತ್ತಿದ್ದಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss