ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಕೆಟ್ಟ ಚಟವಿದೆ: ಸಿದ್ದಲಿಂಗ ಶ್ರೀ

ಹೊಸದಿಗಂತ ವರದಿ, ಕಲಬುರಗಿ:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದು ಧರ್ಮ, ಹಿಂದು ಸಂಸ್ಕೃತಿ ಮತ್ತು ಹಿಂದು ಮುಖಂಡರನ್ನು ಹಿಯ್ಯಾಳಿಸುವ ಕೆಟ್ಟ ಚಟವಿದೆ ಎಂದು ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದ್ದಾರೆ.

ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಹಿಜಾಬ್ ವಿವಾದವನ್ನು ಮಠಗಳಿಗೆ ತಂದಿಟ್ಟಿದ್ದು, ಇದು ಅತ್ಯಂತ ಖಂಡನೀಯ. ಇಡೀ ಮಠಾಧೀಶರ ಸಮೂಹಕ್ಕೆ ಅವಮಾನ ಮಾಡಿರೋದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಜಾಬ್ ಶಾಲೆ ಮತ್ತು ಕೋಟ್೯ನಲ್ಲಿ ವಾದ-ವಿವಾದ ನಡೆದಿತ್ತು. ಹಿಜಾಬ್ ಕಡ್ಡಾಯವಲ್ಲ ಎಂದು ಹೈಕೋರ್ಟ್ ತೀರ್ಪು ಬಂದಿದೆ. ಹೀಗಾಗಿ ಹೈಕೋರ್ಟ್ ತೀರ್ಪು ಬಂದ ಮೇಲೆ ಸಿದ್ದರಾಮಯ್ಯ ಶಾಂತವಾಗಿ ಇರಬೇಕಿತ್ತು.ಆದರೆ ಸಿದ್ದರಾಮಯ್ಯ ನವರಿಗೆ ಒಂದ ಕೆಟ್ಟ ಚಟವಿದೆ ಎಂದು ತೋರಿಸಿದ್ದಾರೆ ಎಂದು ದೂರಿದ್ದಾರೆ.

ಮನುಷ್ಯನಿಗೆ ರೋಗ ಇದ್ದರೆ ಔಷಧಿ ಕೊಡಬಹುದು. ಆದರೆ ಚಟಕ್ಕೆ ಔಷಧಿ ಕೊಡಿಸುವಂತಹ ಯಾವುದೇ ಆಸ್ಪತ್ರೆಯಾಗಲಿ,ಮೆಡಿಕಲ್ ಶಾಪ್ ಆಗಲಿ ಇಲ್ಲ ಎಂದರು. ಸಿದ್ದರಾಮಯ್ಯ ನವರು ಹತಾಶ ರಾಗಿ, ಮತಿಭ್ರಮಣೆಗೆ ಒಳಗಾಗಿದ್ದಾರೆ. ಇಂತಹ ಉಡಾಫೆ ಮಾತುಗಳು ಆಡುಲ ಮೂಲಕ ಮಠಾಧೀಶರನ್ನು ಅವಮಾನ ಮಾಡಿದ್ದಾರೆ ಎಂದು ಹೇಳಿದರು.

ಮಠಾಧೀಶರು ತಲೆ ಮೇಲೆ ವಸ್ತ್ರ ಹಾಕಿಕೊಂಡು ಮಠಗಳಲ್ಲಿ ಇರುತ್ತಾರೆ. ಭಕ್ತರ ಮನೆಗಳಿಗೆ ಹೋಗುತ್ತಾರೆ. ಆದರೆ ಯಾವೊಬ್ಬ ಮಠಾಧೀಶರು ಎಬಿಸಿಡಿ ಕಲಿಯುವುದಕ್ಕೆ ಶಾಲೆಗೆ ಹೋಗುವುದಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರು ಪೆದ್ದನ ತರಹದಲ್ಲಿ ಮಾತನಾಡುವುದನ್ನು ಮೊದಲು ಬಿಡಬೆಕು.ಅವರ ವಚ೯ಸ್ಸಿಗೆ ಅವರೇ ಧಕ್ಕೆ ತಂದುಕೊಳ್ಳುವಂತಹ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಮಠಾಧೀಶರು ಕಾಂಗ್ರೆಸ್ ಪಕ್ಷದ ಜೊತೆಗಿಲ್ಲ. ಈ ದೇಶದ ಬಹುಸಂಸ್ಕೃತಿ ರಕ್ಷಣೆ ಮಾಡುವವರಿಗೆ ಆಶೀರ್ವಾದ ಮಾಡುತ್ತಿದ್ದಾರೆ. ಹೀಗಾಗಿ ಮಠಾಧೀಶರನ್ನು ಎಳೆದುತಂದು ಅವಮಾನ ಮಾಡಿದ್ದರೇ ಆಯಿತು ಎಂದು ಕುಚೇಷ್ಟೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ 2015ರಿಂದಲೇ ಬಹಿಷ್ಕಾರ ಹಾಕುವ ಕೆಲಸ ಮಠಾಧೀಶರು ಮಾಡಿದ್ದಾರೆ. ಹೀಗಾಗಿ ಅಧಿಕಾರ ಕಳೆದುಕೊಂಡು ವಿವವಿಲಃ ಒದ್ದಾಡುತ್ತಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!